ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಶ್ರೀರಾಮುಲುಗೆ ನೀಡಲಿ: ಆನಂದ್ ಸಿಂಗ

ಬಳ್ಳಾರಿ ಏ 21 : ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಇಲ್ಲ. ಅದು ಒಡೆದ ಮನೆಯಾಗಿದೆ. ಸೀಟ್ ಕಾಲಿಯಾದ್ರೇ ಸಾಕು ನಮಗೆ ಬೇಕು, ತಮಗೆ ಅಂತಾ ಹೊಡೆದಾಡಿಕೊಳ್ತಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಪಾಲಿಕೆಯ ಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಸತನಾಡಿದರು.
ನಮಗೆ ಅಧಿಕಾರದ ದುರಾಸೆ ಇಲ್ಲ. ಬಳ್ಳಾರಿ ಉಸ್ತುವಾರಿಯನ್ನು ಶ್ರೀರಾಮುಲು ವಹಿಸಿಕೊಳ್ಳ ಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಳ್ಳವೆ. ಅದಷ್ಟು ಬೇಗ ರಾಮುಲುಗೆ ಉಸ್ತುವಾರಿ ಕೊಡುವಂತೆ ಮನವಿ ಮಾಡುವೆ.
ಶ್ರೀರಾಮುಲು ಕೇವಲ ಜಿಲ್ಲಾ ನಾಯಕರಲ್ಲ, ಅವರು ರಾಜ್ಯಮಟ್ಟದ ನಾಯಕರು. ಅವರಿಗೆ ಡಿಸಿಎಂ ಸ್ಥಾನ ಕೊಡೋ ಬಗ್ಗೆ ವರಿಷ್ಠರು ಬೇಗ ತೀರ್ಮಾನ‌ ಮಾಡಬೇಕು ಎಂದರು.
ಕಾಂಗ್ರೆಸ್ ಗ್ರಾಮ, ನಗರ, ರಾಜ್ಯ, ರಾಷ್ಟದಲ್ಲೂ ಬರಲ್ಲ. ರಾಜ್ಯದಲ್ಲಿ‌ ನಡೆದ
ಉಪ ಚುನಾವಣೆ ಪಲಿತಾಂಶದಿಂದ ಕಾಂಗ್ರೆಸ್ ನವರ ಟೀಕೆಗೆ ಉತ್ತರ ಸಿಗಲಿದೆಂದರು.