ಬಳ್ಳಾರಿ ಜಿಲ್ಲಾಮಟ್ಟದ ಯುವಜನೋತ್ಸವ

ಬಳ್ಳಾರಿ,ಡಿ.30: ಪ್ರತಿಯೊಬ್ಬರಲ್ಲಿ ಒಂದೊಂದು ವಿಶೇಷತೆಯಿದ್ದು ಯುವಜನರು ಕೇವಲ ಓದು, ಪರೀಕ್ಷೆ, ಉದ್ಯೋಗ ಅಂತ ಮೀಸಲಿರದೆ ತಮ್ಮಲ್ಲಿರುವ ಕಲೆಯ ಬಗ್ಗೆ ಗಮನಹರಿಸಬೇಕು ಎಂದು ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಮಾಂಟು ಪತ್ತಾರ್ ಹೇಳಿದರು.ನಗರದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆಯನ್ನು ಕಲೆ, ಸಾಹಿತ್ಯದ ಕಡೆ ಕರೆದುಕೊಂಡು ಹೋಗುವ ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಗಿಸುವ ಕೆಲಸ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನೋತ್ಸವದಂತ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ರೆಡ್ಡಿಯವರು ಮಾತನಾಡಿ, ದೇಶದ ಪ್ರಗತಿಗೆ ಯುವಕರು ನೇರ ಕಾರಣ, ಯುವಕರಲ್ಲಿ ದೇಶವನ್ನು ಕಟ್ಟುವ ಪಕ್ವತೆ ಇದೆ. ಇಂತಹ ಯುವಜನರಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರಿಯಾತ್ಮಕ ಶಕ್ತಿಯನ್ನು ಒಗ್ಗೂಡಿಸುವ ಕಾರ್ಯವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾಡುತ್ತಿದೆ. ಅಪರೂಪದ ಅವಕಾಶಗಳನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನೃತ್ಯ ತರಬೇತುದಾರ ಜಿಲಾನಿ ಭಾಷಾ, ಟಿ.ಜಕ್ರಿಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕರಾದ ಹರಿಸಿಂಗ್ ರಾಥೋಡ್ ಮಾತನಾಡಿದರು, ಈ ಸಂದರ್ಭದಲ್ಲಿ ನೃತ್ಯ ತರಬೇತುದಾರರಾದ ರಾಮಸ್ವಾಮಿ, ತೀರ್ಪುಗಾರರಾದ ಡಾ.ರಾಜು ಹಿರೇಮಠ, ಸ್ಪೂರ್ತಿ ಕಲಾ ಸಂಘದ ಭಾಷಾಸಾಬ್, ಕಲಾವಿದರು ಹಾಗೂ ಇತರರು ಇದ್ದರು.