ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ

ಬಳ್ಳಾರಿ,ಜ.11: ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ ಅವರು ಇಂದು ಕಾರ್ಯಭಾರ ವಹಿಸಿಕೊಂಡರು
ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ‌ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಕಾರ್ಯಭಾರ ಹಸ್ತಾಂತರಿಸಿದರು.
ಪವನಕುಮಾರ್ ಮಾಲಪಾಟಿ ಅವರು 2012ನೇ‌ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದು,ವಾಣಿಜ್ಯ ತೆರಿಗೆಗಳ (ಜಾರಿ) ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಲಪಾಟಿ ಅವರು ಈ ಹಿಂದೆ ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.
ಸರ್ಕಾರ ಇವರ ನೇಮಕದ ಬಗ್ಗೆ ಇಂದು ಆದೇಶ ಹೊರಡಿಸಿದ್ದರೂ. ಇಂದು ಚಾರ್ಜ್ ತೆಗೆದುಕೊಳ್ಳಲು ಅವರು ನಿನ್ನೆಯೇ ರಾತ್ರಿ ನಗರಕ್ಕೆ ಆಗಮಿಸಿದ್ದರು.
ಬೀಳ್ಕೋಡುಗೆ ಸಮಾರಂಭ;
ಕೇಂದ್ರ ಸೇವೆಗೆ ತೆರಳುತ್ತಿರುವ ಎಸ್.ಎಸ್.ನಕುಲ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಾಗಿ ಆಗಮಿಸಿರುವ ಪವನಕುಮಾರ್ ಮಲಪಾಟಿ ಅವರಿಗೆ ಸ್ವಾಗತ ಸಮಾರಂಭ ಇಂದು ಸಂಜೆ 5:15ಕ್ಕೆ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ನಡೆಯುತ್ತಿದೆ.