(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ನಗರದ ಮತದಾರ ಬದಲಾವಣೆ ಬಯಸಿದ್ದಾನೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿ ಹೇಳಿದ್ದಾರೆ.
ಅವರು ಇಂದು ಬೆಳಿಗ್ಗೆ ನಗರದ ಕಪ್ಪಗಲ್ ರೋಡ್, ಬೀಚಿ ನಗರ, ರಾಣಿ ತೋಟ, ಮರಿಸ್ವಾಮಿ ಮಠ ಹಾಗು ಇತರ ಪ್ರದೇಶಗಳ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಸಂಜೆವಾಣಿಯೊಂದಿಗೆ ಮಾತನಾಡುತ್ತಿದ್ದರು.
ನಗರದ ಜನತೆ ನಿರಂತರವಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೇಸತ್ತಿದ್ದಾರೆ. ಈ ನಾರಿ ಮತ್ತೊಂದು ರಾಷ್ಟ್ರೀಯ ಪಕ್ಷ ಆಗಿರುವ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವುದಾಗಿ ಹೇಳುತ್ತಿದ್ದಾರೆ. ಇದು ನಾವು ಮತ್ತಷ್ಟು ಚುರುಕಿನಿಂದ ಪ್ರಚಾರ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆಂದರು.
ಪಕ್ಷದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಜೊತೆಗಿದ್ದರು.