ಬಳ್ಳಾರಿ ಗ್ರಾಮೀಣ ನಾಗೇಂದ್ರ ಭರ್ಜರಿ ಗೆಲುವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಿರೀಕ್ಷೆಯಂತೆ ಗ್ರಾಮಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಂಗ್ರೇದ್ರ ಭರ್ಜರಿ ಮತಗಳ ಅಂತರದಿಂದ ಪ್ರತಿ ಸ್ಪರ್ಧಿ ಸಚಿವ ಶ್ರೀರಾಮುಲು ಅವರ ವಿರುದ್ದ ಗೆಲುವು ಸಾಧಿಸಿದ್ದಾರೆ.

ಆ ದೇವರು ಒಬ್ಬರು ಬಿಟ್ಟರೆ ಯಾರಿಂದಲೂ ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ನಾಗೇಂದ್ರ ಅವರ ಮಾತು ಇಂದು ನಿಜವಾಗಿದೆ.
ಈ ಚುನಾವಣೆ ಹಣ ಮತ್ತು ಜನರ ನಡುವಿನ ಯುದ್ದ ಎಂದಿದ್ದರು. ಅದೇರೀತಿ ಪ್ರತಿ ಸ್ಪರ್ಧಿ ಮತ ಒಂದಕ್ಕೆ ಎರೆಡು ಹಂಚಿದರೂ, ಹಣಕ್ಕೆ ಒಂದು ಧರ್ಮದ ಮತದಾರ, ಗುರುಗಳು ಬಾಗಲಿಲ್ಲ ಎಂಬುದು ಸಾಬೀತಾಗಿದೆ.

ಬೆದರಿಕೆಗೂ ಜನ ಬಯ ಬೀಳದೆ ತಮಗೆ ಮತ ನೀಡಿ ಆಯ್ಕೆಮಾಡಿದ್ದಕ್ಕೆ ನಾಗೇಂದ್ರ ಮತದಾರರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.