ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿ.ತಿಮ್ಮನಗೌಡ ನೇಮಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ರಾಜ್ಯ ಸರ್ಕಾರ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷರನ್ನಾಗಿ ಹೆಚ್.ತಿಮ್ಮನಗೌಡ ಇವರನ್ನು
 ನೇಮಕ ಮಾಡಿ ಆದೇಶ ಹೊರಡಿಸಿದೆ.
ನಗರದ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಹಾಗೂ ಬೀಜ ಮಾರಾಟದ ಉದ್ಯಮಿಗಳು ಆಗಿರುವ ಹೊನ್ನಳ್ಳಿ ತಿಮ್ಮನಗೌಡ ಇವರನ್ನು ಬಗರ್ ಹುಕುಂ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅರ ಪಾತ್ರ ಮಹತ್ವದ್ದಾಗಿದೆ. ಇವರೊಂದಿಗೆ ಈ ಸಮಿತಿಗೆ ಎಲ್.ಗೋವರ್ಧನ್ ರೆಡ್ಡಿ, ವಿ.ಶ್ರೀನಿವಾಸ, ಆರ್.ಗಂಗಮ್ಮ ರೂಪನಗುಡಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಹೆಚ್.ತಿಮ್ಮನಗೌಡ ಅವರು ಕಾಂಗ್ರೆಸ್ ಪಕ್ಷವೂ ನನ್ನ ಸೇವೆಯನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಿದೆ ಇದಕ್ಕೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಬಳ್ಳಾರಿ ನಗರ ಮತ್ತು ಕಂಪ್ಲಿ ಶಾಸಕರು, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಹಿತೈಷಿಗಳಿಗೆ ಆಭಾರೀಯಾಗಿದ್ದಾನೆ. ಪಕ್ಷದ ನೀಡಿರುವ ಜವಾಬ್ದಾರಿಯಿಂದ ಈವರೆಗೆ ಸರ್ಕಾರ ಮತ್ತು ಇತರೆ ಜಮೀನುಗಳಲ್ಲಿ ಸಾಗುವಳಿ ಮಾಡಿರುವ ರೈತರಿಗೆ ನ್ಯಾಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಮ್ಮನಗೌಡ ಹೇಳಿದ್ದಾರೆ.