ಬಳ್ಳಾರಿ ಗ್ರಾಮೀಣ, ಕಂಪ್ಲಿ ಕ್ಷೇತ್ರಹಣ ಜನ ಬಲದ ನಡುವಿನ ಹೋರಾಟಗೆಲುವಿಗಾಗಿ ಬಿಜೆಪಿ ಪ್ರಯತ್ನ ಗೆಲುವಿನ ಅಲೆಯಲ್ಲಿ ಕಾಂಗ್ರೆಸ್


ಎನ್.ವೀರಭದ್ರಗೌಡ
ಬಳ್ಳಾರಿ:ಮೇ,8- ಚುನಾವಣಾ ಪ್ರಚಾರದ ಭಾಷಣದಲ್ಲಿ ರಾಜ್ಯದ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರೇ  ಹೇಳುವಂತೆ. ಬಳ್ಳಾರಿ ಗ್ರಾಮೀಣ ಮತ್ತು ಕಂಪ್ಲಿ ಕ್ಷೇತ್ರಗಳಲ್ಲಿ ಹಣ ಮತ್ತು ಜನ ಬಲದ ನಡುವಿನ ಹೋರಾಟವಾಗಿದೆ ಎಂಬುದು ವಾಸ್ತವವೂ ಆಗಿದೆ. ಬಿಜೆಪಿಯವರು ಹಣಬಲದಲ್ಲಿ ಮುಂದಿದ್ದಾರೆ. ಹಾಗಂತ ಕಾಂಗ್ರೆಸ್ ಹಣ ಹಂಚುತ್ತಿಲ್ಲವೆಂದಿಲ್ಲ ಅದು ಕಡಿಮೆ ಪ್ರಮಾಣದಲ್ಲಿದೆಂಬ ಮಾಹಿತಿ ಇದೆ. ಅವರು ನಮ್ಮದು ಜನ ಬೆಂಬಲವೆಂದೇ ಹೇಳುತ್ತ ಗೆಲುವಿನ ಅಲೆಯಲ್ಲಿದ್ದರೆ. ಬಿಜೆಪಿಯವರು ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯಿಂದ  ಗ್ರಾಮೀಣದಲ್ಲಿ ಮಾವ ಶ್ರೀರಾಮುಲು, ಕಂಪ್ಲಿಯಲ್ಲಿ ಅಳಿಯ ಸುರೇಶ್ ಬಾಬು ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಗ್ರಾಮಿಣದಲ್ಲಿ ಶ್ರೀರಾಮುಲು ಅವರ ಸ್ನೇಹಿತ ಬಿ.ನಾಗೇಂದ್ರ, ಕಂಪ್ಲಿಯಲ್ಲಿ ಗಣೇಶ್ ಹಾಲಿ ಶಾಸಕರಾಗಿ  ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರಲ್ಲಿ ಶಾಸಕರಾಗಲು  ಪಕ್ಷಕ್ಕೆ  ಕರೆತಂದ ಸಿದ್ದರಾಮಯ್ಯ,  ಸಂತೋಷ್ ಲಾಡ್ ಕಾರಣ ಎನ್ನಬಹುದು.
ಗಣೇಶ್ ಯಾರು ಕರೆ ಮಾಡಿದರೂ ತಕ್ಷಣ ಸ್ವೀಕರಿಸಿ. ಸಮಸ್ಯೆಗಳಿದ್ದರೆ ಅದರ ವಿರುದ್ದ  ಏನೇ ಆಗಲಿ ಹೋರಾಟ ಮಾಡಿ  ಜನರ ಪರ ನಿಲ್ಲುತ್ತಿದ್ದುದು ಈಗ ಚುನಾವಣೆಯಲ್ಲಿ ಜನ‌ಬೆಂಬಲಕ್ಕೆ ಕಾರಣವಾಗಿದೆ. ಇದೇ ಅಂಶ ನಾಗೇಂದ್ರ ವಿಷಯದಲ್ಲಿ ಸಹ ಇದೆ. ಇಲ್ಲಿ ಸ್ವತಃ ನಾಗೇಂದ್ರ ಬರದಿದ್ದರೂ ಅವರ ಸಹೋದರ ವೆಂಕಟೇಶ್ ಪ್ರಸಾದ್ ಇಲ್ಲ ಆಪ್ತರು ಬಂದು ಸ್ಪಂದಿಸುತ್ತಿದ್ದುದಾಗಿದೆ. 
ಕಾಂಗ್ರೆಸ್ ಅಭ್ಯರ್ಥಿಗಳು ತಾವು ಜನರ ಸಮಸ್ಯೆಗಳಿಗೆ ಕಳೆದ ಐದು ವರ್ಷಗಳಿಂದ  ಸ್ಪಂದಿಸುತ್ತಾ ಬಂದಿದ್ದೇವೆ. ನಾವೇನು ಚುನಾವಣೆ ಬಂತೆಂದು ಬಿಜೆಪಿಯವರಂತೆ ಕ್ಷೇತ್ರದ ಜನರ ಬಳಿ ಬಂದಿಲ್ಲ. ಹಾಗಾಗಿ ತಮಗೆ ಜನಬಲವಿದೆ ಎಂದು ಹಣ ಬಲದಲ್ಲಿ ಹಿಂದಿದ್ದಾರೆ. ಮತ ಒಂದಕ್ಕೆ ಒಂದು ಸಾವಿರ ಕೊಡುತ್ತಾರೆಂದು ಹೇಳಲಾಗುತ್ತಿದೆ. ಇವರು ಹೋದ ಕಡೆಲ್ಲೆಲ್ಲ ಹೆಚ್ಚಿನ ಜನ ಜನ ಸೇರಿ ಅವರಿಗೆ ಮತ ನೀಡುವ ಘೋಷಣೆ ಕೇಳಿ  ಗೆಲುವಿನ ಅಲೆಯಲ್ಲಿದ್ದಾರೆ.
ಇತ್ತ ಬಿಜೆಪಿಯ  ಅಭ್ಯರ್ಥಿ ಸಚಿವ ಶ್ರೀರಾಮುಲು ಅವರಿಗೆ ಗ್ರಾಮೀಣ ಕ್ಷೇತ್ರ ರಾಜಕೀಯದಲ್ಲಿ ಅವರಿಗೆ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದು. ಕಳೆದ ಮೂರೂ ಚುನಾವಣೆಯಲ್ಲೂ ನಿರೀಕ್ಷೆಗಿಂತಲೂ  ಹೆಚ್ಚಿನ‌ ಬಹುಮತದಿಂದ ಗೆಲುವು ತಂದು ಕೊಟ್ಟಿತ್ತು ಕಾರಣ ಪ್ರಭಲ ಪ್ರತಿ ಸ್ಪರ್ಧಿ ಇರಲಿಲ್ಲ.
ಸಂಸದರಾದ ಕಾರಣ 2014 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಪಕ್ಷದಿಂದ ಕಳೆದುಕೊಂಡ ಮೇಲೆ ಹಿಡಿತ ತಪ್ಪಿದೆ. ಕಳೆದ ಚುನಾವಣೆಯಲ್ಲೂ ಮೊಳಕಾಲ್ಮುರಿಗೆ ಹೋಗಿದ್ದರಿಂದ‌ ಅನೇಕ ಬೆಂಬಲಿಗರು ಗ್ರಾಮಿಣದಲ್ಲಿ ಈಗ ಇಲ್ಲವಾಗಿದ್ದಾರೆ. ಈ ಹಿಂದೆ ಇದ್ದ ಮುಸ್ಲೀಂ ಮತಗಳು ದೂರವಾಗಿವೆ‌.
ಸರ್ವೇಯಲ್ಲಿ ನಿಮಗೆ ಗ್ರಾಮೀಣ ಕ್ಷೇತ್ರವೇ ಸೂಕ್ತ ಎಂದು ಹೇಳಿರುವುದಕ್ಕೆ, ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಬೇಕೆಂಬ ಮಹದಾಸೆಯಿಂದ,  ಕಳೆದ ಒಂದು ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ  ಅಭಿವೃದ್ಧಿ ಮಂತ್ರದ ಜೊತೆ. ಹೋದಲ್ಲೆಲ್ಲ ಮಸೀದಿ, ಗುಡಿಗಳಿಗೆ ಮಹಾದಾನ ಮಾಡಿದ್ದಾರಂತೆ.
ಗುಡಿಗಳಿಗೆ ಹರಿದ ಹಣ ಒಂದಿಷ್ಟು ನೆರವಾಗಬಹುದೇನೋ.. ಆದರೆ  ಕೌಲ್ ಬಜಾರ್ ನ 60 ಮಸೀದಿಗಳಿಗೆ ನೀಡಿದ ದಾನ ಏನಾಗುತ್ತದೆಂಬುದು ನಾಡಿದ್ದು ನಡೆಯುವ ಮತದಾನ ದಿಂದ ತಿಳಿಯಲಿದೆ.  ಬಂದಿರುವ ಮಾಹಿತಿಗಳ ಪ್ರಕಾರ ಮತದಾರರ ಮನವೊಲಿಕೆಗೆ ಒಂದೊಂದು  ದೊಡ್ಡ ಪಿಂಕ್ ನೋಟು ಸಿದ್ದವಾಗಿವೆಯಂತೆ. ಮತದಾರ ಹೆಚ್ಚು ಭರವಸೆ  ನೀಡುವ ಶ್ರೀರಾಮುಲು ಅವರಿಗೆ ಒಲಿಯುತ್ತಾನಾ  ಎಂಬುದು ಮೇ 13 ರಂದು  ತಿಳಿದು ಬರಲಿದೆ.
ಒಟ್ಟಾರೆ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಲಕ್ಷ್ಮೀ ಡ್ಯಾಂತುಂಬಿ ನದಿಗೆ ನೀರು ಬಿಟ್ಟಂತಾದರೆ. ಕಾಂಗ್ರೆಸ್ ನವರು ಕಾಲುವೆಗಳ ಮೂಲಕ ಹರಿಸಿದಂತೆ ಆಗಲಿದೆಂಬ ಮಾತುಗಳು ಕೇಳಿ ಬರುತ್ತಿದೆ.
ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ಸುರೇಶ್ ಬಾಬು ಚುನಾವಣೆ ಬರುತ್ತದೆಂದು ಕಳೆದ ಒಂದು ವರ್ಷದಿಂದ ಕಂಪ್ಲಿ, ಕುರುಗೋಡಿನಲ್ಲಿ ಮನೆ ಮಾಡಿ,  ಜನರನ್ನು ಭೇಟಿ ಮಾಡುತ್ತ, ಗುಡಿ ಗುಂಡಾರಗಳಿಗೆ ಹಣ ನೀಡುತ್ತ. ನಾನು ಸಹ ನಿಮಗೆ ಸ್ಪಂದಿಸುತ್ತೇನೆ ಎಂಬಂತೆ ಪ್ರತಿ ಬಿಂಬಿಸಿದ್ದಾರೆ. ಇದನ್ನು ಮತದಾರರು ಎಷ್ಡರ ಮಟ್ಟಿಗೆ ನಂಬಿದ್ದಾರೋ ಗೊತ್ತಿಲ್ಲ.
ಆದರೆ ಅವರು ಹೋದ ಬಹುತೇಕ ಕಡೆ ಮಾಡುವ ಭಾಷಣದಲ್ಲಿ ಕಳೆದ ಚುನಾವಣೆಯಲ್ಲಿ. ನಾನು ಮಾಡುವುದೆಲ್ಲ ಮಾಡಿದ್ದರೂ  ನಿಮ್ಮ ಊರಲ್ಲಿ ನನಗೆ ಸರಿಯಾಗಿ ಮತ ಹಾಕಿಲ್ಲ ನನಗೆ ಎಲ್ಲಾ ಗೊತ್ತಾಗುತ್ತದೆ ಎಂಬ ಮಾತು ಅವರ ಮತ ಭೇಟೆಗೆ ರಿವರ್ಸ್ ಆಗುವ ಸಾಧ್ಯತೆ ಇದೆ. ಇನ್ನು ಬಿಜೆಪಿಯಾದರೂ ಕ್ಷೇತ್ರದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಿಂಗಾಯತ ಸಮುದಾಯ ಇವರ ಕಡೆ ಹೆಚ್ಚಿನ ಒಲವಿಲ್ಲ ಎನ್ನಲಾಗುತ್ತಿದೆ.  ಸಿದ್ದರಾಮಯ್ಯ ಅವರ ಕಾರಣದಿಂದ ಕುರುಬ ಸಮುದಾಯವೂ ಅಷ್ಟಕ್ಕಷ್ಟೇ ಇದೆ. ಇದರಿಂದ ಇವರು ಗೆಲುವಿಗಾಗಿ ಶತಪ್ರಯತ್ನ‌ ಮಾಡುತ್ತಿದ್ದಾರೆ. ಗಣೇಶ್ ಗಿಂತ ಹೆಚ್ಚು ಮತದಾರರಿಗೆ ಹಣದಿಂದ ಸಮೀಪ ಅಸಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪತ್ನಿಯರ ಪ್ರಚಾರ:
ಕಂಪ್ಲಿಯಲ್ಲಿ  ಹಾಲಿ, ಮಾಜಿ ಶಾಸಕರ ಪತ್ನಿಯರಿಬ್ಬರೂ ಎಡಬಿಡದೆ ಬಿರು ಬಿಸಲನ್ನು ಲೆಕ್ಕಿಸದೇ ಪ್ರಚಾರ ಮಾಡಿದ್ದು ಯಾರು ಗೆಲುವು ತಂದುಕೊಡುತ್ತಾರೋ ಕಾದು ನೋಡಬೇಕಿದೆ.
ಲೆಕ್ಕಕ್ಕೆ ಇಲ್ಲ:
ಗ್ರಾಮೀಣ ಕ್ಷೇತ್ರದಲ್ಲಿ ದಳ‌, ಕೆಆರ್ ಪಿ ಅಭ್ಯರ್ಥಿಗಳು ಇಲ್ಲ.
ಕಂಪ್ಲಿಯಲ್ಲಿ ದಳದ ಅಭ್ಯರ್ಥಿ ರಾಜು ನಾಯಕ್ ಇದ್ದರೂ ಲೆಕ್ಕಕ್ಕೆ ಇಲ್ಲ ಎಂಬಂತೆ ಇದೆ.