ಬಳ್ಳಾರಿ ಗ್ರಾಮೀಣ ಅಭ್ಯರ್ಥಿಯಾಗಿನಾಗೇಂದ್ರ ನಾಮಪತ್ರ ಸಲ್ಲಿಕೆ.


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ.17- ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ನಾಗೇಂದ್ರ ಅವರು ಇಂದು ಸಹಾಯಕ ಆಯುಕ್ತ ಹೇಮಂತ್ ಅವರಿಗೆ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.
ಕೂಡ್ಲಿಗಿಯಿಂದ ಎರಡು ಬಾರಿ ಮತ್ತು ಗ್ರಾಮೀಣದಿಂದ ಒಂದು ಬಾರಿ ಶಾಸಕರಾಗಿದ್ದ. ಹಾಲಿ ಶಾಸಕರಾಗಿರುವ ನಾಗೇಂದ್ರ ಅವರು ಸಧ್ದು ಗದ್ದಲವಿಲ್ಲದೆ ಇಂದು ನಾಮಪತ್ರ ಸಲ್ಲಿಸಿದ್ದಾರೆಂದು ತಿಳಿದು‌ ಬಂದಿದೆ. ಮಾಧ್ಯಮದವರಿಗೂ ಈ ಬಗ್ಗೆ ಮಾಹಿತಿ‌ ಇರಲಿಲ್ಲ. ದಿನ ಚೆನ್ನಾಗಿದೆಂದು‌ ಈ ದಿನ ನಾಮಪತ್ರ ಸಲ್ಲಿಸಿದರು ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ನಾಡಿದ್ದು ಮತ್ತೆ  ಕಾರ್ಯಕರ್ತರೊಡನೆ ಮೆರವಣಿಗೆ ಮೂಲಕ ಬಂದು ನಾಮ ಪತ್ರ ಸಲ್ಲಿಸುತ್ತಾರಂತೆ.