
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.15: ಜಿಲ್ಲೆಯ ಸಂಡೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದ ನಗರದ ಕೆ.ಎಸ್. ದಿವಾಕರ್ ಟಿಕಿಟ್ ಬಗ್ಗೆ ಎದ್ದಿದ್ದ ಗೊಂದಲದಿಂದ ಈಗ ಒಂದಿಷ್ಟು ನಿರಾಳರಾಗುದ್ದಾರೆ ಎಬ್ನಬಹುದು.
ಕಾರಣ ನಿನ್ನೆ ದಿನ ಸಚಿವ ಶ್ರೀರಾಮುಲು ತಾವು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟವಾಗಿ ಘೋಷಣೆ ಮಾಡಿರುವುದು.
ಈ ಹಿಂದೆ ಸಂಡೂರಿನಲ್ಲಿಯೇ ಸಚಿವ ಶ್ರೀರಾಮುಲು ಈ ಬಾರಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಅದರಲ್ಲೂ ಸಂಡೂರು ಇಲ್ಲ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡವುದಾಗಿ ಹೇಳಿದ್ದರು.
ಆಗ ಸಂಡೂರು ಟಿಕೆಟ್ ಆಕಾಂಕ್ಷಿಯಾಗಿದ್ದ ದಿವಾಕರ್ ಅವರಿಗೆ ಟಿಕೆಟ್ ಬಗ್ಗೆ ಆತಂಕ ಶುರುವಾಗಿತ್ತು. ಶ್ರೀರಾಮುಲು ಅವರ ನಿನ್ನೆಯ ಘೋಷಣೆಯಿಂದ ದಿವಾಕರ್ ಈಗ ನಿರಾಳರಾಗಿದ್ದಾರೆ.
ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ದಿವಾಕರ್ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ.
ಹೀಗಂತ ದಿವಾಕರ್ ಗೆ ಬಿಜೆಪಿ ಟಿಕೆಟ್ ಖಾಯಂ ಎಂದೇನಿಲ್ಲ. ಟಿಕೆಟ್ ಯಾರಿಗೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ ಅದು ಒಂದಿಷ್ಟು ಕಾರ್ತಿಕ್ ಘೋರ್ಪಡೆ ಅವರ ಅಭಿಪ್ರಾಯದ ಮೇರೆಗೆ.
ಇನ್ನು ಸಂಡೂರಿನಲ್ಲಿ ಗಣಿ ಮಾಲೀಕರೆಲ್ಲ ಸೇರಿ ಯಾರೇ ಆಗಲಿ, ಯಾವ ಪಕ್ಷದವರೇ ಆಗಲಿ, ಸ್ಥಳೀಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಹೊರಗಿನವರ ಕೈಗೆ ಅಧಿಕಾರ ಕೊಟ್ಟರೆ ನಮ್ಮಬದುಕು ಸಂಕಷ್ಟಕ್ಕೆ ಈಡಾಗಲಿದೆ ಎಂಬ ತೀರ್ಮಾನ ತೆಗೆದುಕೊಂಡಿರುವುದು. ಇನ್ನು ಸಂಸದ ವೈ. ದೇವೇಂದ್ರಪ್ಪ ಅವರ ಸೊಸೆ ಮಹದೇವಮ್ಮ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿರುವ ಎರೆಡು ಅಂಶಗಳು ದಿವಾಕರ್ ಅವರಿಗೆ ಕಗ್ಗಂಟಾಗಿವೆ. ಇವುಗಳನ್ನು ಪರಿಹರಿಸಿಕೊಳ್ಳಬೇಕಿದೆ.