ಬಳ್ಳಾರಿ ಗಾಂಜಾ ಮುಕ್ತ ಜಿಲ್ಲೆಯಾಗಬೇಕುಪೊಲೀಸರಿಗೆ ಸಚಿವ ನಾಗೇಂದ್ರ ತಾಕೀತು


ಬಳ್ಳಾರಿ: ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಾಕೀತು ಮಾಡಿದ್ದಾರೆ.

ನಗರದಲ್ಲಿನ ಎಸ್ಪಿ ಕಚೇರಿಯಲ್ಲಿಂದು ಮಧ್ಯಾಹ್ನ ಐಜಿ, ಲೋಕೇಶ, ಎಸ್ಪಿ ರಂಜಿಂತ್ ಕುಮಾರ್ ಬಂಡಾರ್, ಮೇಯರ್ ತ್ರಿವೇಣಿ ಅವರೊಂದಿಗೆ ಪೋಲಿಸ್ ಅಧಿಕಾರಿಗಳ ಸಭೆ ನಡೆಸಿ
ಬಳ್ಳಾರಿ ನಗರ ಹಾಗೂ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲೂ ಗಾಂಜಾ ಫೆಡ್ಲರ್ ಗಳ ಹಾವಳಿ ಹೆಚ್ಚಾಗಿದೆ. ಶಾಲಾ.ಕಾಲೇಜು ಮಕ್ಕಳು ಸೇರಿದಂತೆ ಸಾಮಾನ್ಯ ಜನರು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ. ಗಾಂಜಾ ಹಾವಳಿಗೆ ಹೆದರಿ ಮಕ್ಕಳನ್ನು ಜನತೆ ದೂರದೂರಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಿದ್ದಾರೆ.

ಇದನ್ನು ನಿಯಂತ್ರಿಸಲು
ನಗರಾದ್ಯಂತ ರಾತ್ರಿ ಹೊತ್ತಲ್ಲಿ ಪೋಲಿಸ್ ಗಸ್ತು ಪರಿಣಾಮಕಾರಿಯಾಗಿ ಬಲಪಡಿಸಿ ಎಂದು ಸೂಚಿಸಿದ್ದಾರೆ.

ಟ್ರಾಫಿಕ್ ಸಮಸ್ಯೆ. ಒನ್ ವೇ ..ಇಲಾಖೆಗೆ ಅಗತ್ಯವಿರುವ ಅವಶ್ಯಕತೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಿ.ನಗರದಲ್ಲಿ ರೌಡಿಗಳ ಹಟ್ಟಹಾಸ ಮಟ್ಟ ಹಾಕುವಲ್ಲಿ ನಿರ್ಧಾಕ್ಷಣ್ಯ ಕ್ರಮ ವಹಿಸಬೇಕೆಂದದ್ದಾರೆ.

ರೌಡಿಶೀಟರ್ ಗಳ ಪೆರೇಡ್ ಮಾಡಿ ಸರಿಯಾದ ತಿಳುವಳಿಕೆ ಹೇಳಿ, ಎಚ್ಚರಿಕೆ ನೀಡಿ. ವ್ಯಾಪಾರಸ್ಥರು. ನಾಗರೀಕರು ನೆಮ್ಮದಿಯಾಗಿ ಬದುಕುವ ವಾತಾವರಣ ನಗರದಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ.