ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರತ್ ರೆಡ್ಡಿ ನಾಮಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:  ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರತ್ ರೆಡ್ಡಿ ಇಂದು ಮಧ್ಯಾಹ್ನ ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಅವರು ಸಾವಿರಾರು ಬೆಂಲಿಗರೊಂದಿಗೆ ದುರ್ಗಮ್ಮ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ಆಗಮಿಸಿದರು.ಪಟಾಕಿ ಸಿಡಿಸುತ್ತ, ಡೊಳ್ಳು ಮೊದಲಾದ ಕಲಾ ತಂಡಗಳೊಂದಿಗೆ ಮೆರವಣಿಗೆ ಸಾಗಿ ಬಂತು. ನಗರದ ಎಲ್ಲಾ ಭಾಗದಿಂದ ಜನರನ್ನು ಕರೆತರಲಾಗಿತ್ತು. ಒಟ್ಟಾರೆ ಜನಶಕ್ತಿ ಪ್ರದರ್ಶನ ಜೋರಾಗಿತ್ತು.
ನಾಮ‌ಪತ್ರ ಸಲ್ಲಿಸುವ ವೇಳೆ  ಪಕ್ಷದ ಮುಖಂಡರುಗಳಾದ  ನಾಸೀರ್ ಹುಸೇನ್, ಅಲ್ಲಂ ವೀರಭದ್ರಪ್ಪ, ಬಿ.ನಾಗೇಂದ್ರ, ಆಂಜನೇಯಲು, ರಾವೂರು ಸುನೀಲ್, ಎಂ.ಅನೂಫ್, ಕೆ.ಎಸ್.ಎಲ್.ಸ್ವಾಮಿ, ಚಾನಾಳ್  ಶೇಖರ್, ಬೆಣಕಲ್ ಬಸವರಾಜ್ ಗೌಡ,  ಮೊದಲಾದವರು ಇದ್ದರು.