ಬಳ್ಳಾರಿ : ಕಟ್ಟಡ ವಿಸ್ತಾರ ಅನುಪಾತ ಹೆಚ್ಚಳ ಆದೇಶ ಬಿಡುಗಡೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.29: ಕಳೆದ ಅನೇಕ ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಬಹುಮಹಡಿ ಕಟ್ಟಡಗಳನ್ನು ಕಟ್ಟಲು ಕಟ್ಟಡ ವಿಸ್ತಾರ ಅನುಪಾತವು ತುಂಬಾ ಕಡಿಮೆ ಇದ್ದು, ಇದರಿಂದ ಯಾವುದೇ ಬಿಲ್ಡರ್‍ಗಳು, ಡೆವಲಪರ್‍ಗಳು ಅಪಾರ್ಟ್‍ಮೆಂಟ್‍ಗಳನ್ನು ಕಟ್ಟಲು ಮುಂದೆ ಬರಲು ಹಿಂಜರಿಯುತ್ತಿದ್ದರು. ಇದರಿಂದ ಆರ್ಥಿಕವಾಗಿಯೂ ಸಹ ಮಾರುಕಟ್ಟೆಯಲ್ಲಿ ಹಿಂಜರಿತ ಉಂಟಾಗಿತ್ತು. ಇಂತಹ ಸಂಕ್ಲಿಷ್ಟ ಪರಿಸ್ಥಿತಿಯಲ್ಲಿ ಅನೇಕ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ತುಂಬಾ ತೊಂದರೆಯುಂಟಾಗಿದ್ದು, ಇದನ್ನು ಅರಿತ ಬಳ್ಳಾರಿ ಕೌನ್ಸಿಲ್ ಆಫ್ ಇಂಜಿನಿಯರ್ ಅಂಡ್ ಬಿಲ್ಡರ್ಸ್‍ರವರು ಸರ್ಕಾರಕ್ಕೆ ನಿವೇದಿಸಿ, ಕಟ್ಟಡ ವಿಸ್ತಾರ ಅನುಪಾತವು ಹೆಚ್ಚಿಸುವಂತೆ ನಗರ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಮೂಲಕ ಮನವಿ ಸಲ್ಲಿಸಲ್ಲಾಗಿತ್ತು. ನಂತರದ ದಿನಗಳಲ್ಲಿ ನಗರ ಶಾಸಕರ ಜಿ.ಸೋಮಶೇಖರರೆಡ್ಡಿ ಅವರೊಂದಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಮಾರುತಿ ಪ್ರಸಾದ್‍ರವರ ಜೊತೆಗೂಡಿ ಮನವಿಯನ್ನು ಆಲಿಸಿ, ಸರ್ಕಾರದಿಂದ ಆದೇಶವನ್ನು ಜಾರಿ ಮಾಡಿಸುವುದರಲ್ಲಿ ಯಶಸ್ವಿ ಮಾಡಿಕೊಟ್ಟಿದ್ದರಿಂದ ಆದೇಶ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ನಿನ್ನೆ ಸಂಜೆ ನಗರದ ಹೊಸಪೇಟೆ ರಸ್ತೆಯಲ್ಲಿರುವ ಗುರು ಫಂಕ್ಷನ್ ಹಾಲ್‍ನಲ್ಲಿ ನ‌ಡೆಯಿತು.
ಕಾರ್ಯಕ್ರಮವನ್ನು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷದ ಎಸ್.ಮಾರುತಿ ಪ್ರಸಾದ್ ಉದ್ಘಾಟಿಸಿದರು. ನಂತರದ ಆದೇಶ ಪ್ರತಿಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯಶವಂತ ಭೂಪಾಲ್, ಸ್ಪಾಂಜ್ ಐರನ್ ಅಸೋಸಿಯೇಷನ್ ಅಧ್ಯಕ್ಷ ಶಿವ (ವಾಸು), ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಡಿ.ಎಲ್. ರಮೇಶ್ ಗೋಪಾಲ್, ಕಾರ್ಯದರ್ಶಿ ಯಶವಂತ ರಾಜ್, ಕೌನ್ಸಿಲ್ ಆಫ್ ಇಂಜಿನಿಯರ್ಸ್ ಅಂಡ್ ಬಿಲ್ಡರ್ಸ್‍ನ ಅಧ್ಯಕ್ಷ ಕೆ.ಬಿ.ಸಂಜೀವಪ್ರಸಾದ್ ಮತ್ತು ಉಪಾಧ್ಯಕ್ಷ ಸುಧೀರ್ ಅವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶನ ಸದಸ್ಯರಾದ ಜ್ಯೋತಿ ಪ್ರಕಾಶ್, ನರಸಪ್ಪ, ಶಂಕ್ರಪ್ಪ ಮತ್ತು ರಾಮಾಂಜಿನಿ ಇವರುಗಳನ್ನು ಸನ್ಮಾನಿಸಲಾಯಿತು. ಇಂಜಿನಿಯರ್ಸ್ ಮತ್ತು ಬಿಲ್ಡರ್‍ಗಳು ಉಪಸ್ಥಿತರಿದ್ದರು.