ಬಳ್ಳಾರಿ ಏಕಶಿಲಾ ಬೆಟ್ಟದ ಮೇಲೆ 65 ಅಡಿ ಉದ್ದದ ಕನ್ನಡ ಧ್ವಜ

ಬಳ್ಳಾರಿ ನ 01 : ರಾಜ್ಯೋತ್ಸವದ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ಸಂಘಟನೆ 65 ಅಡಿ ಉದ್ದದ ಕನ್ನಡ ಧ್ವಜವನ್ನು ನಗರದ ಏಕಶಿಲಾ ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆಯ ಮೇಲೆ ಇಂದು ನಸುಕಿನಲ್ಲಿಯೇ ಆರೋಹಣ ಮಾಡಿತು.
ಪ್ರತಿ ರಾಜ್ಯೋತ್ಸವ ದಿನದಂದು ಕೋಟೆ ಮೇಲೆ ಮುಂಜಾವಿನಲ್ಲಿಯೇ ಕನ್ನಡ ಧ್ವಜಾರೋಹಣ ಮಾಡುವ ಸಂಪ್ರದಾಯವನ್ನು ಈ ಸಂಘಟನೆ ಮಾಡಿಕೊಂಡು ಬಂದಿದ್ದು ಈ ಬಾರಿ 65 ನೇ ರಾಜ್ಯೋತ್ಸವ ಆಗಿದ್ದರಿಂದ 65 ಅಡಿ ಉದ್ದದ ಧ್ವಜವನ್ನು ಸಂಘಟನೆಯ ಮುಖಂಡರು ಹತ್ತಾರು ಜನ ಯುವಕರು ಸೇರಿ ಆರೋಹಣ ಮಾಡಿ ಕನ್ನಡತನ ಮೆರೆದಿದ್ದಾರೆ. ಈ ಧ್ವಜ ಹಾರಾಟ ನಗರದ ಬಹುತೇಕ ಭಾಗಕ್ಕೆ ದರ್ಶನವಾಗುತ್ತದೆ.
ನಗರದ ಜನರೆಲ್ಲ ನಮ್ಮ ರಾಜ್ಯದ ಭಾವುಟ ದರ್ಶನ ಮಾಡಿ, ನಾಡು ನುಡಿಯ ಹೆಮ್ಮೆಯನ್ನು ಪಡೆದುಕೊಳ್ಳಲಿ. ನಾಡಿನ ಭಾವುಟ ಎಂದೆಂದಿಗೂ ಭಾನೆತ್ತರದಲ್ಲಿ ಹಾರಾಡಲಿ, ರಾಜ್ಯದ ಜನತೆಗೆ ತಾಯಿ ಭುವನೇಶ್ವರಿ ಉತ್ತಮ ಮಳೆ ಬೆಳೆ ಕೊಡಲಿ ಎಂದು ಎಂಬ ಆಶಯದಿಂದ ಈ ಕಾರ್ಯ ಮಾಡುತ್ತಿರುವುದಾಗಿ ಸಂಘಟನೆಯ ಮುಖಂಡ ಸಿದ್ಮಲ್ ಮಂಜುನಾಥ್ ಮೊದಲಾದವರು ಹೇಳಿದರು.