ಬಳ್ಳಾರಿ ಉತ್ಸವ ನಾಳಿನ ಕಾರ್ಯಕ್ರಮಗಳು


ಬಳ್ಳಾರಿ,)ಜ.20: ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 21ರಂದು ಬೆಳಗ್ಗೆ 8ಕ್ಕೆ ನಗರದ ಕೋಟೆ ಆವರಣದಲ್ಲಿ ಜಿಪ್‍ಲೈನ್, ರಾಕ್ ಕ್ಲೈಂಬಿಂಗ್, ಪ್ಯಾರಾ ಸೀಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದೇ ದಿನದಂದು ಬೆಳಗ್ಗೆ 9ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮರಳು ಶಿಲ್ಪಕಲೆ ಪ್ರದರ್ಶನ ಏರ್ಪಡಿಸಲಾಗಿದ್ದು, ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಚಾಲನೆ ನೀಡುವರು.
ಜ.21 ರಂದು ಬೆಳಗ್ಗೆ 10ಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೈಕ್ ಸ್ಟಂಟ್ ನಡೆಯಲಿವೆ. ಮಾಹಿತಿಗಾಗಿ ಮೊ.9845145046 ಗೆ ಸಂಪರ್ಕಿಸಬಹುದು.
ಜ.21 ರಂದು ಬೆಳಗ್ಗೆ 10ಕ್ಕೆ ವಿಮ್ಸ್ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಕಬ್ಬಡ್ಡಿ ಆಯೋಜಿಲಾಗಿದ್ದು, ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡುವರು. ಮಾಹಿತಿಗಾಗಿ ಮೊ.7929612786 ಗೆ ಸಂಪರ್ಕಿಸಬಹುದು.
ಜ.21 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೆ ಮಲ್ಲಕಂಭ ಆಯೋಜಿಸಲಾಗಿದೆ. ಬೆಳಗ್ಗೆ 10.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಫಲ, ಪುಷ್ಪ ಪ್ರರ್ದಶನ ಏರ್ಪಡಿಸಲಾಗಿದ್ದು, ಸಂಸದರಾದ ವೈ.ದೇವೇಂದ್ರಪ್ಪ ಅವರು ಚಾಲನೆ ನೀಡುವರು. ಜ.21 ರಂದು ಬೆಳಗ್ಗೆ 10.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮತ್ಸ್ಯ ಮೇಳ ಆಯೋಜಿಸಲಾಗಿದ್ದು, ಸಂಸದರಾದ ಡಾ.ಸೈಯದ್ ನಾಸೀರ್ ಹುಸೇನ್ ಅವರು ಚಾಲನೆ ನೀಡುವರು. ಬೆಳಗ್ಗೆ 11.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ.
ಉತ್ಸವದ ಅಂಗವಾಗಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.