ಬಳ್ಳಾರಿ ಉತ್ಸವದ ಮ್ಯಾರಥಾನ್ ಓಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜ.18: ನಗರದಲ್ಲಿ ಹಮ್ಮಿಕೊಂಡಿರುವ ಬಳ್ಳಾರಿ ಉತ್ಸವದ  ಪೂರ್ವಭಾವಿಯಾಗಿ ಜನರ ಗಮನ ಸೆಳೆಯಲು   ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಡಿ ಇಂದು ಬೆಳಿಗ್ಗೆ  ಮ್ಯಾರಥಾನ್ ಓಟ ನಡೆಯಿತು.
ಈ‌ ಮ್ಯಾರಥಾನ್ ಓಟ  ನಗರದ ಮುನಿಷಿಪಲ್ ಮೈದಾನದಿಂದ ಆರಂಭಗೊಂಡು ಗಡಗಿ ಚೆನ್ನಪ್ಪ ವೃತ್ತ, ಹೆಚ್.ಆರ್.ಗವಿಯಪ್ಪ ವೃತ್ತ, ವಾಲ್ಮೀಕಿ, ದುರ್ಗಮ್ಮ ಗುಡಿ, ಅಂಡ್ರಬ್ರಿಡ್ಜ್ , ಕೋರ್ಟ್ ರಸ್ತೆ ಮೂಲಕ ಪುನಃ ಮುನಿಷಿಪಲ್ ಮೈದಾನಕ್ಕೆ ಬಂದ ತಲುಪಿತು.
ಸಾರಿಗೆ ಸಚಿವರ ವ  ಬಿ.ಶ್ರೀರಾಮುಲು ಅವರು ಇದಕ್ಕೆ ಹಸಿರು ಭಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ನಗರ ಶಾಸಕ ಸೋಮಶೇಖರ ರೆಡ್ಡಿ,  ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಎಡಿಸಿ ಪಿ.ಎಸ್ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ನೂರಾರು ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು.