ಬಳ್ಳಾರಿ ಉತ್ಸವದಲ್ಲಿ ಎಸಿ, ಎಎಸ್ಪಿ  ಭರ್ಜರಿ ಸ್ಟೆಪ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.22: ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ನಿನ್ನೆ ನಡೆದ ಬಳ್ಳಾರಿ ಉತ್ಸವದ ರಾಘವರ ವೇದಿಕೆ ಮೇಲೆ ಎಸಿ, ಎಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು  ಅರ್ಜುನ ಜನ್ಯ ಅವರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. 
ಅರ್ಜುನ್ ಜನ್ಯಾ ಅವರು ಹಾಡಿದ ವಿಲನ್ ಚಿತ್ರದ ಟಿಕ್ ಟಿಕ್ ಹಾಡಿಗೆ ಜಿಲ್ಲಾ ಹೆಚ್ಚುವರಿ ಎಸ್ ಪಿ ನಟರಾಜ್, ಎಡಿಸಿ ಮಂಜುನಾಥ, ಎಸಿ ಹೇಮಂತ್, ಪಾಲಿಕೆ ಆಯುಕ್ತ ರುದ್ರೇಶ್, ಲೋಕೋಪಯೋಗಿ ಇಂಜಿನೀಯರ್ ವೆಂಕಟರಮಣ,  ಮೊದಲಾದ ಅಧಿಕಾರಿಗಳು ನೃತ್ಯ ಮಾಡಿ ಮಜಾ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಪೊಲೀಸ್ ಡ್ರೆಸ್ ಮೇಲೆ ಸ್ಟೆಪ್ ಹಾಕಿದ ಹೆಚ್ಚುವರಿ ಎಸ್ ಪಿ ಬಗ್ಗೆ ಆಕ್ಷೇಪ ಕೇಳಿ‌ಬಂದಿದೆ.
ಇದಕ್ಕೆ ನಾನೇನು ಕಡಿಮೆ ಇಲ್ಲ ಎಂಬಂತೆ ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಸಹ ಹಾಡೊಂದಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.