ಬಳ್ಳಾರಿ ಅಭಿವೃದ್ಧಿಗಾಗಿ ಭರತ್ ಗೆ ಮತ ನೀಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ನಗರದ ಅಗಡಿ ಮಾರೆಪ್ಪ ಕಾಂಪೌಂಡ್, ಮಾರುತಿ ಕಾಲೋನಿ,16ನೇ ವಾರ್ಡ್‌ ನಲ್ಲಿ   ಕಾಂಗ್ರೆಸ್ ಮುಖಂಡ  ನಾರಾ ಪ್ರತಾಪ್ ರೆಡ್ಡಿ ಅವರು ತಮ್ಮಪತ್ನಿ  ನಾರಾ ಶೈಲಜ ಅ ವರೊಂದಿಗೆ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
  ಶ್ರೀ ಸಾಯಿ ಸೇವಾ ಟ್ರಸ್ಟ್ ನ ಆಡಳಿತ ಮಂಡಳಿಯಿಂದ ನಾರಾ ಪ್ರತಾಪ್ ರೆಡ್ಡಿ ದಂಪತಿಗಳಿಗೆ ಸನ್ಮಾನ ಮಾಡಲಾಯಿತು ನಂತರ ಮಾತಾನಾಡಿದ ಪ್ರತಾಪ್ ರೆಡ್ಡಿ  ಅವರು. ಬಳ್ಳಾರಿ ಅಭಿವೃದ್ಧಿಗೆ ಯುವನಾಯಕ ನಾರಾ  ನಾರಾಭರತ್ ರೆಡ್ಡಿ ಅವರಿಗೆ ಮತ ಹಾಕಿ  ಬಹುಮತದಿಂದ  ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂಧರ್ಬದಲ್ಲಿ ವಾರ್ಡನ ಮುಖಂಡರಾದ  ರಾಮು ರೇಣುಗುಂಟಲ, ಕಿಶೋರ್, ಜಯಂತ್, ವೀರಾಂಜನೇಯಲು, ಸುಕುಮಾರ್, ನಾರಾಯಣ ರೆಡ್ಡಿ, ಆರ್,ವೈ,ಹನುಮಂತ ರೆಡ್ಡಿ, ಶ್ರೀ ಕಾಂತರೆಡ್ಡಿ, ಓಬಳರೆಡ್ಡಿ, ಶಿವುಕುಮಾರ್, ಸೋಮಶೇಖರ್, ವೇಣುಗೋಪಾಲ, ವೀರಾರೆಡ್ಡಿ ಇನ್ನಿತರರು ಭಾಗವಹಿಸಿದ್ದರು.