ಬಳ್ಳಾರಿ ಅಕಿಮ್ ಎಂಬಿಎ ಕಾಲೇಜಿಗೆ ಮ್ಯಾನೇಜ್ಮೇಂಟ್ ಫೆಸ್ಟ್ ನಲ್ಲಿ 5 ಪ್ರಶಸ್ತಿಗಳು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.13: ಆಂದ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಶ್ರೀ ರಾಮಕೃಷ್ಣ ಡಿಗ್ರಿ ಮತ್ತು ಪಿಜಿ ಕಾಲೇಜಿನಲ್ಲಿ ಸೆ 10 ರಂದು  ನಡೆದ  ಒಂದು ದಿನದ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೇಂಟ್ ಫೆಸ್ಟ್ ನಲ್ಲಿ ಬಳ್ಳಾರಿ ವೀ. ವಿ. ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ್ದು,   5 ಪ್ರಥಮ ಬಹುಮಾನಗಳನ್ನು ಪಡೆದಿದ್ದಾರೆ.
ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಸಣ್ಣ ಬಸವರಾಜ, ಆಡಳಿತ ಮಂಡಳಿ ಸದಸ್ಯರಾದ ಅಲ್ಲಂ ವಿನಾಯಕ,  ವಿ. ನಾಗರಾಜ ಶರ್ಮ,. ಬಿ. ರವೀಂದ್ರ ನಾಥ,  ವೈ. ರವಿ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಟಿ. ಗೋಪಿ, ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.