ಬಳ್ಳಾರಿ‌ ಪಾಲಿಕೆ ಕಾಂಗ್ರೆಸ್ ಜಯಭೇರಿ ಶಾಸಕ ನಾಗೇಂದ್ರ ಹರ್ಷ

ಬಳ್ಳಾರಿ ಏ 30 : ಇಲ್ಲಿನ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವ ಬಗ್ಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಚುಬಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ. ಬಿಜೆಪಿ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಉದೆ ಎಂದು ನಾನು ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಹೇಳಿದ್ದೆ. ಜನ ಬೆಲೆ ಏರಿಕೆ, ರೇಷನ್ ಖಡಿತ, ಫಾರಂ 2 ನೀಡುವಲ್ಲಿ ಜನತೆಗೆ ಕಿರುಕುಳ, ಕರೋನಾ ಸಂಕಷ್ಟದಲ್ಲಿ ಸಾಮಾನ್ಯ ಜನತಗೆ ನೆರವಾಗದಿರುವುದು, ಗ್ಯಾಸ್ ಸಬ್ಸಿಡಿ ಖಡಿತ ಮೊದಲಾದ ಕಾರಣದಿಂದ ಬೇಸತ್ತು ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ.
ನನ್ನ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ 11 ವಾರ್ಡಿನಲ್ಲಿ 9 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಂದು ವಾರ್ಡಿನಲ್ಲಿ ಪಕ್ಷೇತರರು ಸಹ ನಮ್ಮ‌ಪಕ್ಷದವರೇ ಆಗಿದ್ದಾರೆ ಎಂದರು.

ಚುನಾವಣಾ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿ ಸಂತಸ ವ್ಯಕ್ತಪಡಿಸಿದ್ದು ಮುಂದಿನ ಕಾರ್ಯಗಳಿಗೆ ನಿನೇ ಲೀಡ್ ತೆಗೆದುಕೊಳ್ಳುವಂತೆ ಹೇಳಿದ್ದಾರೆಂದರು.
ಒಟ್ಟಾರೆ ಪಕ್ಷದ ಮುಖಂಡರ ಸಾಮೂಹಿಕ ಪ್ರಯತ್ನ, ಮತದಾರರ ಒಲವಿನಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತಾಗಿದೆಂದರು.