ಬಳ್ಳಾರಿ‌ ಜಿಲ್ಲೆಯಲ್ಲಿ ಇಂದು ಕೋವಿಡ್ ಗೆ 27 ಜನ ಸಾವು 1280 ಜನರಿಗೆ ಪಾಸಿಟಿವ್

ಬಳ್ಳಾರಿ ಮೇ 04 : ಮಹಾ ಮಾರಿ ಕೋವಿಡ್ ಸೋಂಕು ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದು 1280 ಜನರಲ್ಲಿ‌ ಕಂಡುಬಂದಿದ್ದು 27 ಜನ‌ ಸಾವನ್ನಪ್ಪಿದ್ದಾರೆ.
ಇಂದು 27 ಜನ‌ ಸೇರಿ ಕಳೆದ 10. ದಿನದಲ್ಲಿ 153 ಜನ ಕೋವಿಡ್ ಗೆ ಬಲಿಯಾಗಿದ್ದಾರೆ.
ಈ ವರಗೆ ಜಿಲ್ಲೆಯಲ್ಲಿ 793 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ
ಇಂದು 3176 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 1280 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು. ಇದರಿಂದಾಗಿ ಜಿಲ್ಲೆಯಲ್ಲಿ 11462 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇಂದು 557 ಜನ ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 56201 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ 647 , ಸಂಡೂರು 181, ಹೊಸಪೇಟೆ 132 ಜನರಲ್ಲಿ ಸೋಂಕು‌ ಕಾಣಿಸಿಕೊಂಡಿದೆ.