ಬಳ್ಳಾರಿ‌ ಜಿಲ್ಲೆಗೆ ಕೆಕೆಡಿಬಿಯಿಂದ 15 ಕೋಟಿ ರೂ

ಬಳ್ಳಾರಿ ಮೇ 31 : ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದಿಂದ ಜಿಲ್ಲೆಗೆ ಹದಿನೈದು ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಬಳ್ಳಾರಿಯಲ್ಲಿಂದು ಮಾತನಾಡಿದ ಅವರು ಈ ಹಣದಲ್ಲಿ ಹತ್ತು ಆ್ಯಂಬುಲೆನ್ಸ್ ಖರೀದಿ ಮಾಡಲಾಗಿದೆ. ಇನ್ನುಳಿದ ಅನುದಾನದ ಸದ್ಬಳಕೆಗಾಗಿ ಕ್ರಿಯಾ ಯೋಜನೆ ಮಾರ್ಪಾಡಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಕರೋನಾ ಸೋಂಕಿನ‌ ರೋಗಿಗಳಿಗೆ ಚಿಕಿತ್ಸೆ ನೀಡಲು
ಜಿಲ್ಲೆಗೆ ಈಗಾಗಲೇ ಇಪ್ಪತ್ತೈದು ವೆಂಟಿಲೇಟರ್ ‌ಬಂದಿವೆ. ಅವಶ್ಯಕತೆ ಇದ್ದರೆ ಇನ್ನಷ್ಟು ವೆಂಟಿಲೇಟರ್ ತರಲಿದೆಂದರು.

ಲಾಕ್ಡೌನ್ ವಿಸ್ತರಣೆ ಕುರಿತು ಆಯಾ ಜಿಲ್ಲೆಯ ಉಸ್ತುವಾರಿಗಳು ನೋಡಿಕೊಳ್ಳಲು ಮುಖ್ಯ ಮಂತ್ರಿಗಳು ಹೇಳಿದ್ದಾರೆ.
ಜೂನ್ 30 ರವರೆಗೆ ಲಾಕ್ಡೌನ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ. ಲಾಕ್ಡೌನ್ ಮಾಡ್ತಿವಿ ಮಾಡೋದಿಲ್ಲ ಅನ್ನೋ ಬಗ್ಗೆ ಈಗಲೇ ಹೇಳೋಕೆ ಅಗಲ್ಲ. ತಜ್ಞರ ಸಮಿತಿ ನಿರ್ಣಯದ ಮೇಲೆ ಲಾಕ್ಡೌನ್ ಭವಿಷ್ಯ‌ ನಿರ್ಧಾರವಾಗಲಿದೆಂದರು.

ವಯಕ್ತಿಕವಾಗಿ ಸದ್ಯಕ್ಕೆ ಲಾಕ್ಡೌನ್ ತೆರವು ಮಾಡಬಾರದು ಅನಿಸುತ್ತದೆ
ಯಾಕೆಂದರೆ ಸ್ವಲ್ಪ ಮೈಮರೆತರು
ಅನಾಹುತ ಆಗುತ್ತದೆ. ಹೀಗಾಗಿ ಮುಂದುವರೆದು ಒಳ್ಳೆಯದು‌.
ಲಾಕ್ಡೌನ್ ನಿಂದ ಕೆಲವರಿಗೆ ತೊಂದರೆ ಆಗ್ತದೆ.ಅಂತಹವರಿಗೆ ಮುಖ್ಯ ಮಂತ್ರಿಯವರು ಪರಿಹಾರದ ಪ್ಯಾಕೇಜ್ ನೀಡಲಿದ್ದಾರೆಂದು ತಿಳಿಸಿದರು.
ಇದಕ್ಕೂ ಮುನ್ನ‌ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರೊಂದಿಗೆ ಮಂಡಳಿಯ ಅನುದಾನದ ಬಳಕೆ ಬಗ್ಗೆ ಪರಿಶೀಲನೆ ಸಭೆ ನಡೆಸಲಾಯಿತು.