ಬಳ್ಳಾರಿಯ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ನಗರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು  ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಸೋಮಶೇಖರ ರೆಡ್ಡಿ ಮತದಾರರಿಗೆ ಮನವಿ ಮಾಡಿದರು.
ಅವರು ನಗರದ  ಬಂಡಿಮೋಟ್ ಪ್ರದೇಶದಲ್ಲಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿ, ಅಭಿವೃದ್ಧಿ ಪರವಾಗಿರುವ ಕೇಂದ್ರ  ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಈಗಾಗಲೇ ಮಾಡಿದ್ದು.  ಬಳ್ಳಾರಿ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಮನೆ ಮನೆಗೂ ಶೌಚಾಲಯ, ಬಡವರಿಗೆಂದೇ  ಪ್ರಧಾನ್ ಮಂತ್ರಿ  ಮೋದಿ ಅವರ ನೇತೃತ್ವದಲ್ಲಿ ಹಲವಾರು ಯೋಜನೆಗಳನ್ನು ತಂದಿದ್ದು ಅದರಿಂದ ಎಲ್ಲಾ ವರ್ಗದ ಜನರಿಗೂ ಬಹಳ ಅನುಕೂಲಗಳಾಗಿವೆ ಎಂದು ಮತದಾರರಿಗೆ ಅಂಕೆ ಸಂಖ್ಯೆಗಳ ಮೂಲಕ‌  ತಿಳಿಸಿದರು.
 ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮುಖಾಂತರ ಸಮಗ್ರ ಬಳ್ಳಾರಿ ಅಭಿವೃದ್ಧಿಗೆ ತಾವು ಸಹ ಭಾಜನರಾಗಬೇಕೆಂದು ಮನವಿ ಮಾಡಿದರು.
  ವಾರ್ಡಿನ  ಮುಖಂಡರಾದ ಗಾದಿಲಿಂಗ, ಕೃಷ್ಣ, ಮೆಹಬೂಬ್ ಬಾಷಾ, ನಾಗರಾಜ್, ಗೋಪಾಲ್ ಮೊದಲಾದವರು ಇದ್ದರು.