ಬಳ್ಳಾರಿಯ ಕೀರ್ತಿ ಪತಾಕೆಯನ್ನು ಜಗದೆಲ್ಲೆಡೆ ಪಸರಿಸಿದ ಮಹಾನಟ ಬಳ್ಳಾರಿ ರಾಘವ


ಬಳ್ಳಾರಿ, ಏ,17-  ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ರಾಘವರ 77ನೇ ವಾರ್ಷಿಕ  ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯಕಾರ್ಯಕಾರಿಣಿ ಸದಸ್ಯರು ಹಾಗೂ ಸಾಹಿತಿಗಳಾದ ಎನ್.ಬಸವರಾಜ್ ರವರು ಬಳ್ಳಾರಿ ರಾಘವರ ಸಾಧನೆಗಳ ಬಗ್ಗೆ ಮಾತನಾಡುತ್ತಾ ರಾಘವರು ಬಳ್ಳಾರಿಯ ಮುನ್ಸಿಪಲ್  ಹೈಸ್ಕೂಲ್ ನಲ್ಲಿ ಓದಿ ಮುಂದೆ ಮದ್ರಾಸ್ ನಲ್ಲಿ ಕಾನೂನು ಪದವಿಯನ್ನು ಪಡೆದರು, ಬಳ್ಳಾರಿಯಲ್ಲಿ ವಕೀಲವೃತ್ತಿ ಪ್ರಾರಂಭಿಸಿದರು.ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಬೆಳೆಸಿಕೊಂಡಿದ್ದ ರಾಘವರು ಪಂಚ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.ನಾಟಕರಂಗದ ಅಧ್ಯಯನಕ್ಕಾಗಿ ವಿದೇಶ ಪ್ರಯಾಣ ಮಾಡಿದರು.ಅವರ ನಟನೆಯನ್ನು ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರ್ ರವರು ಕೊಂಡಾಡಿದರು.ಇಂತಹ ಮಹಾನಟರು 16/4/1946 ರಂದು ಹಂಪೆಯ ವಿರೂಪಾಕ್ಷ ರಥೋತ್ಸವದಂದು ಇಹಲೋಕ ತ್ಯಜಿಸಿದ್ದಾರೆ.ಆದರೆ ತಮ್ಮ ನಟನೆಯಿಂದ ಬಳ್ಳಾರಿಯ ಕೀರ್ತಿ ಪತಾಕೆಯನ್ನು ಜಗದೆಲ್ಲೆಡೆ ಪಸರಿಸಿದ ಮಹಾನಟರೆಂಬ ಹೆಗ್ಗಳಿಕೆಗೆ ಪಾತ್ರರಾದರೆಂದರು.ಕಾರ್ಯಕ್ರಮವು ವಲೀಭಾಷಾರವರ ಪ್ರಾರ್ಥನೆ ಯಿಂದ ಪ್ರಾರಂಭ ವಾಯಿತು.ಅಧ್ಯಕ್ಷರಾದ ಕೆ.ಕೋಟೇಶ್ವರ ರಾವ್ ರವರು ಅಧ್ಯಕ್ಷೀಯ ನುಡಿಗಳಲ್ಲಿ ರಾಘವರು ಮಾಡಿರುವ ಸಾಧನೆಗಳನ್ನು ಕಲಾವಿದರು ಸ್ಮರಿಸಿಕೊಂಡು ಕಲಾವಿದರು ಬೆಳೆಯಬೇಕು ಮತ್ತು ಅವರ ಹೆಸರಿನಲ್ಲಿರುವ ಸಂಸ್ಥೆ ಸ್ಥಾಪನೆಯಾಗಿರುವ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ಸುದ್ದಿ ಎಂದು ನುಡಿದರು. .ವಂದನಾರ್ಪಣೆಯನ್ನು ಸಹ ಕಾರ್ಯದರ್ಶಿ ಎಂ.ರಾಮಾಂಜನೇಯುಲು ಸಲ್ಲಿಸಿದರು.ಕಾರ್ಯಕ್ರಮ ನಿರ್ವಹಣೆ ಯನ್ನು ಗೌರವ ಕಾರ್ಯದರ್ಶಿ ಗಳಾದ ಎನ್.ಪ್ರಕಾಶ್,ರವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ  ಕೆ ಚನ್ನಪ್ಪ, ಉಪಾಧ್ಯಕ್ಷ ರಾದ ಹೆಚ್ ವಿಷ್ಣುವರ್ಧನ್ ರೆಡ್ಡಿ, ಕೆ.ರಾಮಾಂಜನೇಯಲು, ಕೆ ಕೃಷ್ಣ,ಟಿ.ಜಿ.ವಿಠಲ್,ಡಾ.ರಮೇಶ ಗೋಪಾಲ್,ಜಿ ಪ್ರಭಾಕರ,ಗಾದೆಂ ಗೋಪಾಲ್ ಕೃಷ್ಣ,ವಿ ರಾಮಚಂದ್ರ,ಶೇಷ ರೆಡ್ಡಿ, ರಮಣಪ್ಪ ಭಜಂತ್ರಿ ಕಲಾವಿದರು ಭಾಗವಹಿಸಿದ್ದರು.ನಂತರ ಜಿ.ಆರ್.ವೆಂಕಟೇಶುಲು ರವರು ರಚಿಸಿ ನಿರ್ದೇಶಿಸಿದ ಅಮ್ಮಾ ನಾನ್ನಕು ಪೆನ್ಷನ್ ವಚ್ಚಿಂದಿ ಎಂಬ ತೆಲುಗು ನಾಟಕ ಪ್ರದರ್ಶನ ಗೊಂಡು ಪ್ರೇಕ್ಷಕರ ಮನ ಸೂರೆ ಗೊಂಡಿತು.