ಬಳ್ಳಾರಿಯ ಔಷಧ ವಿಜ್ಞಾನಿ ಶ್ರೀನಿವಾಸರೆಡ್ಡಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ ನ 01 : ನಗರದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಔಷಧ ವಿಜ್ಞಾನಿಯಾಗಿ (ವೈಜ್ಞಾನಿಕ ಅಧಿಕಾರಿ) ಕಾರ್ಯನಿರ್ವಹಿಸುತ್ತಿರುವ ಎನ್.ಶ್ರೀನಿವಾಸರೆಡ್ಡಿ ಯವರಿಗೆ ಹೈದರಾಬಾದ್‍ನ ಜವಹರ್‍ಲಾಲ್ ನೆಹರು ಟೆಕ್ನಾಲಾಜಿಕಲ್ ಯೂನಿವರ್ಸಿಟಿಯು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನ ಮಾಡಿದೆ.
ಡಾ.ಮಹೇಂದ್ರ ಕುಮಾರ್, ಡಾ.ಎ.ರಮೇಶ್ ರವರ ಮಾರ್ಗದಶನದಲ್ಲಿ “ಫಾರ್ಮುಲೇಷನ್ ಅಂಡ್ ಎವ್ಯಾಲ್ಯೂಯೇಷನ್ ಆಫ್ ಗ್ಯಾಸ್ಟ್ರೋ-ರಿಟೆಂಟಿವ್ ಡ್ರಗ್ ಡೆಲಿವರಿ ಸಿಸ್ಟಮ್ ಫಾರ್ ಯಾಂಟಿ ಹೈಪರ್‍ಟೆನ್ಸಿವ್ ಡ್ರಗ್ಸ್” – ಎಂಬ ಔಷಧ ವಿಜ್ಞಾನ ವಿಷಯದ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿಯನ್ನು ನೀಡಿದೆ. .
ಇವರು ಈ ಹಿಂದೆ ಬೆಂಗಳೂರಿನ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಔಷಧಗಳ ಉತ್ಪಾದನಾ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಇವರು ರಾಷ್ಟ್ರ ಮಟ್ಟದ ಔಷಧ ವಿಜ್ಞಾನ ಕ್ಷೇತ್ರದ ಹಲವಾರು ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದು, ಇವರ ಸಂಶೋಧನೆಗೆ ಸಂಬಂಧಿತ ಲೇಖನಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವೈಜ್ಞಾನಿಕ ಜರ್ನಲ್‍ಗಳಲ್ಲಿ ಪ್ರಕಟವಾಗಿವೆ. ಔಷಧ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಯ ಜೊತೆಗೆ ಗಾಯನ, ಕಾರ್ಯಕ್ರಮಗಳ ಉತ್ತಮ ನಿರೂಪಕರಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲೆಯಿಂದ ಪ್ರತಿನಿಧಿಸಿದ್ದಾರೆ.