ಬಳ್ಳಾರಿಯ ಇನ್ನರ್ ವೀಲ್ಹ್ ಕ್ಲಬ್ ಸುವರ್ಣ ಮಹೋತ್ಸವ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.07: ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಳ್ಳಾರಿಯ ಇನ್ನರ್ ವೀಲ್ಹ್ ಕ್ಲಬ್ ಸುವರ್ಣ ಮಹೋತ್ಸವ ಕಾರ್ಯಕ್ರಮ ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇನ್ನರ್ ವೀಲ್ಹ್ ಕ್ಲಬ್ ನ ಅಧ್ಯಕ್ಷ ಜ್ಯೋತಿ ಲಕ್ಷ್ಮಣ್, ಇನ್ನರ್ ವೀಲ್ಹ್ ನ್ಯಾಷನಲ್ ಎಡಿಟರ್ ನ ವೀಣಿಸ್ವಾಮಿ ರೋಟರಿ ಕ್ಲಬ್ ನ ಜಿಲ್ಲಾ ಗೌರ್ನರ್ ತಿರುಪತಿ ನಾಯ್ಡು ಇವರು ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಜ್ಯೋತಿ ಲಕ್ಷ್ಮಣ್ ಅವರು, ಬಳ್ಳಾರಿ ಕ್ಲಬ್ ನ ಸದಸ್ಯರು ಸಮಾಜ ಮುಖಿ ಕಾರ್ಯಕ್ರಮಗಳು ಮತ್ತು ಸೇವೆಯನ್ನು ಶ್ಲಾಘಿಸಿದರು.
ತಿರುಪತಿಯವರು ಮಾತನಾಡಿ, ಸ್ತ್ರೀ ಸಬಲೀಕರಣ ಮತ್ತು ಸಮಾಜದ ಏಳಿಗೆಯಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದು ಎಂದರು. ಸ್ತ್ರೀಯರಿಗೆ ಅವಶ್ಯವಾದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಉತ್ಪನ್ನಗಳನ್ನು ಉತ್ಪಾದಿಸಲು ಕೈಗಾರಿಕೆಯನ್ನು ಸ್ಥಾಪಿಸಲು ಮುಂದಾದರೆ ರೋಟರಿ ಕ್ಲಬ್ ಇದಕ್ಕೆ ಸಹಕಾರ ನೀಡಲಿದೆಂದರು.
ಇನ್ನರ್ ವೀಲ್ಹ್ ಕ್ಲಬ್ ನ ಬಳ್ಳಾರಿಯ ಅಧ್ಯಕ್ಷೆ ರೂಪಶ್ರೀ, ಕಾರ್ಯದರ್ಶಿ ಕೆ.ಸಿಂಧು ಕಿರಣ್, ಖಜಾಂಚಿ ಲಕ್ಷ್ಮಿಪ್ರಿಯ, ಮತ್ತಿತರೆ ಸದಸ್ಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣೀಯ ಸೇವೆ ಸಲ್ಲಿಸಿದ ಡಾ|| ನಾಗರತ್ನ ಜೋಷಿ, ಅರವಿಂದ್ ಎ, ವಿರೂಪಾಕ್ಷಪ್ಪ, ಮೌನೇಶಪ್ಪ, ಮೊದಲಾದವರನ್ನು ಸನ್ಮಾನಿಸಿ ಗೌರವಿಸಿದರು, ನಂತರ ಅನುಗ್ರಹ ಫೌಂಡೇಷನ್ ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

Attachments area