
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,30- ರಾಜ್ಯದ ನೆಲಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಬಯಸಿದ್ದ ನಗರದ ಆರ್ ಟಿ ಓಕಚೇರಿಯ ನೌಕರ ಎನ್. ನಾಗೇಶ್ ಕುಮಾರ್ ಕಂಬಾಳ ಜೆಡಿಎಸ್ ಟಿಕೆಟ್ ದೊರೆಯದ ಕಾರಣ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಭೇಟಿ ಮಾಡಿ. ಕೆಆರ್ ಪಿಪಿ ಟಿಕೆಟ್ ಕೇಳಿದ್ದಾರೆಂದು ತಿಳಿದು ಬಂದಿದೆ.
ನಗರದ ಆರ್ ಟಿಓ ಕಚೇರಿಯಲ್ಲಿ ಹಲವು ವರ್ಷಗಳಿಂದ ನೌಕರರಾಗಿದ್ದ ನಾಗೇಶ್ ಮಾಜಿ ಪ್ರಧಾನಿ ದೇವೆಗೌಡರ ಜೊತೆ ಸಂಪರ್ಕ ಹೊಂದಿದ್ದರು. ಟಿಕೆಟ್ ನೀಡದ ಕಾರಣ ಅನಿವಾರ್ಯವಾಗಿ ಕೆಅರ್ ಪಿಪಿ ಕದ ತಟ್ಟಿದ್ದಾರೆ.
ಈ ಕಚೇರಿಯಲ್ಲಿ ದುಡಿದ ಹಣವನ್ನು ಈ ಚುನಾವಣೆ ಮೂಲಕ ಆ ಕ್ಷೇತ್ರದ ಜನರ ಪಾಲಾಗಲು ಪ್ರಯತ್ನ ನಡೆಸಿದ್ದಾರೆ ಎನ್ನಬಹದು.