ಬಳ್ಳಾರಿಯ ಅಭಿವೃದ್ಧಿ ಯೋಜನೆಗಳ ಮಂಜೂರಾತಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿಗೆ ಮನವಿ

ಬಳ್ಳಾರಿ, ಮಾ.26: ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ, ಭೂವಿಜ್ಞಾನ ಸಚಿವ ಪ್ರಹ್ಲಾದ್ ಜೋಷಿಯವರನ್ನು ನವದೆಹಲಿಯ‌ ಸಂಸತ್ ಭವನದಲ್ಲಿ ಇಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಮೊದಲಾದವರು ಭೇಟಿ ಮಾಡಿ
ಬಳ್ಳಾರಿ ನಗರದ ಅಭಿವೃದ್ಧಿಗೆ ಅವಶ್ಯವಾದ ಯೋಜನೆಗಳು ಮಂಜೂರಾತಿಗೆ ಸಹಕಾರ ಮಾಡಬೇಕೆಂದು ಮನವಿ ಮಾಡಿದರು.
ಬಳ್ಳಾರಿ ನಗರದ ಉತ್ತರ ಭಾಗದಲ್ಲಿ ಹೊರ ವರ್ತುಲ ರಸ್ತೆ ಅಭಿವೃದ್ಧಿ, ಸುಧಾ ಕ್ರಾಸ್ ನ ರೈಲ್ವೆ ಹಳಿಗೆ ಬಳ್ಳಾರಿ ಮತ್ತು ಬಳ್ಳಾರಿ ಕಂಟೋನ್ಮೆಂಟ್ ಕೇಂದ್ರಗಳ ನಡುವಿನ ಹುಬ್ಬಳ್ಳಿ-ಗುಂತಕಲ್ಲು ವಿಭಾಗದಲ್ಲಿ ಎಲ್ಸಿ ಸಂಖ್ಯೆ 1108 ರ ಬದಲಾಗಿ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ, ಮೋತಿ ಟಾಕೀಸ್ ಬಳಿಯ ರೈಲ್ವೆ ಓವರ್ ಸೇತುವೆಯನ್ನು ಅಗಲಗೊಳಿಸುವುದು.ಅನಂತಪುರ ರಸ್ತೆಯಿಂದ ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಸ್ತಿತ್ವದಲ್ಲಿರುವ ರೈಲ್ವೆ ಮಾರ್ಗಕ್ಕಿಂತ ಕೆಳಗಿರುವ ರೈಲ್ವೆ ಅಂಡರ್ ಸೇತುವೆ ನಿರ್ಮಾಣ
ಮೋತಿ ಟಾಕೀಸ್ ಬಳಿಯ ರೈಲ್ವೆ ಓವರ್ ಸೇತುವೆಯನ್ನು ಅಗಲಗೊಳಿಸುವುದು. 1961 ರ ಆದಾಯ ತೆರಿಗೆ ಕಾಯ್ದೆಯ (ಯುಡಿಎ) ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವಿನಾಯಿತಿ ಅಂಡರ್ ಸೆಕ್ಲಾನ್ 1046)
ಬಳ್ಳಾರಿ ಕೋಟೆಗೆ ರೋಪ್‌ ವೇ / ಕೇಬಲ್ ಕಾರಿನ ಸ್ಥಾಪನೆ. ಸಂಗನಕಲ್ಲು ಬೆಟ್ಟವನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವುದು
ಈ ಎಲ್ಲ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಕೇಂದ್ರ ಸಚಿವರ ಗಳೊಂದಿಗೆ ಸಮಾಲೋಚಿಸಿ ಆದಷ್ಟು ಬೇಗ ಈ ಎಲ್ಲಾ ಯೋಜನೆಗಳಿಗೆ ಅನುದಾನ ಮತ್ತು ಅನುಮತಿಗಳನ್ನು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.