ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,7- ನಗರದ ಅಭಿವೃದ್ಧಿಯೇ ನಮ್ಮ‌ಮೂಲ‌ಂಮಂತ್ರವಾಗಿದೆ. ಇದನ್ನು ಮೆಚ್ಚಿ ಬಿಜೆಪಿ ಮತ್ತಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು ನಮ್ಮ‌ಬೆಂಬಲಕ್ಕೆ ಬಂದಿದ್ದಾರೆಂದು ನಗರದ ಕೆಆರ್ ಪಿ ಪಕ್ಷದ  ಅಭ್ಯರ್ಥಿ ಲಕ್ಷ್ಮೀ  ಅರುಣ ಹೇಳಿದ್ದಾರೆ.
ಅವರು ನಿನ್ನೆ ಸಾಯಂಕಾಲ ಇಲ್ಲಿನ ದೇವಿನಗರ, ಕಪ್ಪಗಲ್ ರಸ್ತೆ, ಹೊಸ ಬಸ್ ಸ್ಟ್ಯಾಂಡ್ ಹತ್ತಿರ, ಮಿಲ್ಲರ್ ಪೇಟೆ ಭಾಗಗಳಲ್ಲಿ ಬಹಿರಂಗ ಸಭೆಗಳನ್ನು  ನಡೆಸಿ ಮಾತನಾಡುತ್ತಿದ್ದರು.  ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು. ಬಡವರಿಗೆ ಉಚಿತ ಶಿಕ್ಷಣ, ಆರೋಗ್ಯ ಹಾಗೂ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲಾಗುವುದು ಒಮ್ಮೆ ಈ ಮಹಿಳೆಗೆ ಆಶಿರ್ವದಿಸಿ ಎಂದರು.
ಪುತ್ರಿ ಬ್ರಹ್ಮಿಣಿ  ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

One attachment • Scanned by Gmail