ಬಳ್ಳಾರಿಯಿಂದ ಬಂತು ಆಕ್ಸಿಜನ್ ಟ್ಯಾಂಕರ್

ಕಲಬುರಗಿ ಮೇ 1: ಬಳ್ಳಾರಿಯಿಂದ ಆಕ್ಸಿಜನ್ ತುಂಬಿಕೊಂಡ ಟ್ಯಾಂಕರ್ ಪೊಲೀಸ್ ಭದ್ರತೆಯಲ್ಲಿ ನಗರಕ್ಕೆ ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರು ” ಕಲಬುರಗಿ ಪೊಲೀಸ್ ಕಮಿಷನರ್ ಎನ್ ಸತೀಶಕುಮಾರ್ ಅವರು ಬಳ್ಳಾರಿ ಡಿಸಿ ಮತ್ತು ಎಸ್ಪಿ ಅವರೊಂದಿಗೆ ಮಾತನಾಡಿ, ಜಿಲ್ಲೆಗೆ ತುರ್ತಾಗಿ ಅಗತ್ಯ ಇರುವದರಿಂದ ಕಲಬುರಗಿಗೆ ತರಿಸಿಕೊಂಡಿದ್ದಾರೆ.
ಆ ಟ್ಯಾಂಕರ್ ಬೀದರಿಗೆ ಹೋಗಬೇಕಿತ್ತು.ಅದನ್ನು ಪೊಲೀಸ್ ಭದ್ರತೆಯಲ್ಲಿ ತರಿಸಲಾಗಿದೆ ಎಂದರು.ಕಲಬುರಗಿಯಲ್ಲಿ ಮತ್ತೊಂದು ಹೊಸ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿದೆ.ಅಲ್ಲಿ ನಿತ್ಯ 300 ಸಿಲಿಂಡರ್ ಉತ್ಪಾದನೆಯಾಗುತ್ತದೆ.ಬರುವ ವಾರ 1300 ಜಂಬೋ ಸಿಲಿಂಡರ್ ಜಿಲ್ಲೆಗೆ ಬರಲಿವೆ.ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ ಎಂದರು.