ಬಳ್ಳಾರಿಯಲ್ಲಿ 750 ಚೀಲಅಕ್ರಮ ಪಡಿತರ ಅಕ್ಕಿ ವಶ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಮೇ 16:
ನಗರದ ಹೊರವಲಯದಲ್ಲಿನ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115 ರ ಬದಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ದಾಳಿ ನಡೆಸಿ ಇಂದು ವಶಪಡಿಸಿಕೊಂಡಿದೆ

ವಶಪಡಿಸಿಕೊಳ್ಳಲಾದ ಪಡಿತರ ಅಕ್ಕಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಅಕ್ರಮ ಪಡಿತರ ಅಕ್ಕಿಯನ್ನು ಸಾಗಾಣೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.