
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,3- ಕಾಂಗ್ರೆಸ್ ಪಕ್ಷ ಸೇರಿದ ನಾರಾ ಪ್ರತಾಪ್ ರೆಡ್ಡಿ ಅವರು ಸುದ್ದಿಗೋಷ್ಟಿ ನಡೆಸಿ. ಕಾಂಗ್ರೆಸ್
ಪಕ್ಷ ಚೆನ್ನಾಗಿದೆ. ಸಿದ್ದಾಂತಗಳು ಚೆನ್ನಾಗಿದೆಂದರು.
ಭಾರತ್ ಜೋಡೋ ಯಾತ್ರೆಗೆ ಬಂದಾಗ ರಾಹುಲ್ ಅವರು ಜೀನ್ಸ್ ಸಿದ್ದ ಉಡುಪಗಳ ಉತ್ಪಾದನೆ ಅಲ್ಲಿನ ಸಮಸ್ಯೆಗಳನ್ನು ಅರಿತು ಮತ್ತು ಮಾರುಕಟ್ಟೆ ಮಾಡಲು ಇಂಗ್ಲೆಂಡ್ ನಲ್ಲಿ ಮಾತನಾಡಿ, ಐದು ಸಾವಿರ ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಉತ್ಪಾದನಾ ಕಾರ್ಯಕ್ಕೆ ಯೋಜನೆ ಪ್ರಕಟಿಸಿರುವ ಅವರ ಕಾರ್ಯ ಸ್ವಾಗತಾರ್ಹ. ಇದಕ್ಕಾಗಿ ಯೋಜನೆಗಳನ್ನು ಈಗಗಾಲೇ ಸಿದ್ದಪಡಿಸಿದೆಂದರು.
ಜಿಲ್ಲೆಯಿಂದ ಸಾಫ್ಟ್ ವೇರ್ ಇಂಜಿನೀಯರಿಂಗ್ ಮುಗಿಸಿರುವ ಸಾವಿರಾರು ಯುವಕರು ಇಲ್ಲಿಂದ ಬೇರೆ ಬೇರೆ ಕಡೆ ಇರುವ ಸಾಫ್ಟ್‌ವೇರ್ ಪಾರ್ಕ್ ಗಳಿಗೆ ಹೋಗಬೇಕಿದೆ.
ಅದಕ್ಕಾಗಿ ಬಳ್ಳಾರಿಯಲ್ಲಿ ಸಾಫ್ಟ್‌ವೇರ್ ಪಾರ್ಕ್ ಸ್ಥಾಪನೆ ಅಗತ್ಯ ಇದೆ. ಇಲ್ಲಿ ಸಾಫ್ಟ್‌ವೇರ್ ಪಾರ್ಕ್ ಆಗಬೇಕು ಎಂದರು.
ಲಂಚ ಮುಕ್ತ:
ಲಂಚ ಮುಕ್ತಿ ಕರ್ನಾಟಕ ಎಂಬ ಘೋಷ ವಾಕ್ಯದಿಂದ ಭರತ್ ರೆಡ್ಡಿ ಪ್ರಚಾರಕ್ಕೆ ಬಂದುದು ನನಗೆ ವಯಕ್ತಿಕವಾಗಿ ಹೆಮ್ಮೆ ಎನಿಸಿತು. ಲಂಚ ಇಲ್ಲದೆ ಬಳ್ಳಾಯಲ್ಲಿ ಏನೂ ಆಗಲ್ಲ. ಲಂಚ ಮುಕ್ತ ಬಳ್ಳಾರಿ ಬೇಕಿದೆಂದರು.
ಪಕ್ಷ ಸೇರ್ಪಡೆ, ಪ್ರೆಸ್ ಮೀಟ್ ಕಾರ್ಯಕ್ರಮಕ್ಕೂ ಜಿಲ್ಲಾಡಳಿತದಿಂದ ಅನುಮತಿ ಕೊಡಲು ಕಿರಿ ಕಿರಿ ಮಾಡುತ್ತಾರೆ. ಕಾಂಗ್ರೆಸ್ ಏನೇ ಮಾಡಲಿ ಅಡ್ಡಿಪಡಿಸುತ್ತಿದೆ. ಇವರೆಲ್ಲ ಆಟ ಮೇ 13 ವರಗೆ ನಡೆಸುತ್ತಾರೆ ನಡೆಸಲಿ ಎಂದರು.