ಬಳ್ಳಾರಿಯಲ್ಲಿ ವಿಜೃಂಭಿಸಿದ ವಿಶ್ವಕಲಾ ದಿನಾಚರಣೆ

ಬಳ್ಳಾರಿ ಏ 19 :ಯಾವುದೇ ವ್ಯಕ್ತಿ ಸದಾ ಕ್ರಿಯಾಶೀಲನಾಗಿದ್ದರೆ ಏನೆಲ್ಲಾ ಸೃಜಿಸಬಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ ಈ ವಿಭಿನ್ನ ರೀತಿಯ ಚಿತ್ರಗಳೇ ಸಾಕ್ಷಿ. ಚಾರ್ಲಿ ಚಾಪ್ಲಿನ್ ತನ್ನ ನಿಜ ಜೀವನದಲ್ಲಿ ಎಷ್ಟೇ ನೋವು ಸಂಕಟವಿದ್ದರೂ ನಟನೆಯಲ್ಲಿ ನಗೆಯನ್ನು ಚಿಮ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕ್ಕೆ ರಂಗಣ್ಣನವರ ನುಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷಸಿದ್ಧರಾಮ ಕಲ್ಮಠ ಮಾತನಾಡಿ 64 ಕಲೆಗಳಲ್ಲಿ ಅತಿ ಪ್ರಮುಖವಾದುವು ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ ಭಾರತೀಯ ಸಂಪ್ರದಾಯಗಳಲ್ಲಿ ಲಲಿತ ಕಲೆಗಳು ಪ್ರಮುಖವಾಗಿವೆ. ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಅದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು.
ಕರ್ನಾಟಕ ಲಲಿತ ಕಲಾ ಅಕಾಡಮಿಯ ಸದಸ್ಯ ಯ.ಅಶೋಕ್ ಮಾತನಾಡಿ, ಕಲಾವಿದರು ಹಳೆಯ ಸಂಪ್ರದಾಯಗಳಿಗೆ ಜೋತು ಬೀಳದೆ ಕಲೆಯಲ್ಲಿ ಹೊಸತನ ಹೊಸ ಆವಿಸ್ಕಾರಗಳನ್ನು ಮಾಡಬೇಕು.ಹೊಸ ಹೊಸ ರೀತಿಯ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಂಡಾಗ ಇಡೀ ವಿಶ್ವವೇ ನಿಮ್ಮ ಕಲಾ ಪ್ರೌಢಿಮೆಯನ್ನು ಗಮನಿಸಿ ಗೌರವ ನೀಡುತ್ತದೆ ಎಂದರು.
ಭವಾನಿ ಲಲಿತಕಲಾ ಮಂದಿರದ ಸಂಸ್ಥಾಪಕ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆರ್. ಎಲ್ ಜಾಧವ್ ಮಾತನಾಡಿ ಚಿತ್ರಕಲಾ ಶಿಕ್ಷಕರಲ್ಲಿ ನವಚೈತನ್ಯ ಮೂಡಿಸುವಂತಹ ಇಂಥ ಪ್ರದರ್ಶನಗಳು ಪ್ರತಿವರ್ಷ ನಡೆಯುವಂತಾಗಲಿ ಎಂದು ಆಶಿಸಿದ ರಲ್ಲದೆ ಬಳ್ಳಾರಿ ಜನತೆಯೂ ಕೂಡ ಇಂಥ ಪ್ರದರ್ಶನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿ ನೋಡುವಂತಾಗಲಿ ಎಂದು ಆಶಿಸಿದರು
ಅಧ್ಯಕ್ಷತೆವಹಿಸಿ ಮಾತನಾಡಿದ ಬಳ್ಳಾರಿ ವಿಜಯನಗರ ಜಿಲ್ಲೆ ಗಳ ಅಧ್ಯಕ್ಷರಾದ ಯು ರಮೇಶ್ ಅವರು ವಿಶ್ವ ಕಲಾ ದಿನಾಚರಣೆ ಯನ್ನು ಲಿಯೋನಾರ್ಡೊ ಡಾ ವಿಂಚಿಯ ಜನ್ಮದಿನ ವನ್ನಾಗಿ ಪ್ರತಿವರ್ಷ ಏಪ್ರಿಲ್ ಹದಿನೈದು ರಂದು ಆಚರಿಸಲಾಗುತ್ತಿದೆ ಇದು ಲಿಯೋನಾರ್ಡೊ ಡಾ ವಿಂಚಿಯ ಐನೂರ ಎಪ್ಪತ್ತನೇ ಜನ್ಮದಿನಾಚರಣೆ ಯಾಗಿದೆ ಈ ಸಂದರ್ಭದಲ್ಲಿ ಸಂಗೀತ ಸಾಹಿತ್ಯ ರಚನೆ ಪೇಂಟಿಂಗ್ ಕಾರ್ಯಾಗಾರ ಮುಂತಾದ ಚಟುವಟಿಕೆಗಳು ನಡೆಯುತ್ತಿವೆ ಲಿಯೊನಾರ್ಡೊ ಡಾ ವಿನ್ಸಿಯ ಚಿತ್ರಕಲೆ ಮಾತ್ರವಲ್ಲದೆ ಗಣಿತ ವಿಜ್ಞಾನ ಸಸ್ಯ ಶಾಸ್ತ್ರ ಶರೀರ ಶಾಸ್ತ್ರ ಸಾಹಿತ್ಯ ಸಂಗೀತ ಭೂಗೋಳಶಾಸ್ತ್ರ ವನ್ನೂ ಸಹ ಬಲ್ಲವರಾಗಿದ್ದರೂ ಎಂದರು
.ಶಿಲ್ಪ ಮತ್ತು ಚಿತ್ರಕಲಾ ಸಂಘದ ಚಿಕ್ಕಬಳ್ಳಾಪುರದ ಅಧ್ಯಕ್ಷಎನ್ ಎಂ ಶಿವರಾಜ್ ಇದ್ದರು. ಕಾರ್ಯಕ್ರಮದ ನಿರೂಪಣೆ ನಿರ್ವಹಣೆಯನ್ನು ಬಳ್ಳಾರಿ ಜಿಲ್ಲಾ ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಕೆ ಬಿ ಸಿದ್ದಲಿಂಗಪ್ಪ ನಿರ್ವಹಿಸಿದರು 56 ಕಲಾಕೃತಿಗಳು ಪ್ರದರ್ಶಿತವಾಗಿದ್ದವು.