
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,24- ಕಲಾವಿದರಿಂದ ಮೇಲಾಧಿಕಾರಿ ಹೆಸರೇಳಿ ಕಚೇರಿ ಸಿಬ್ಬಂದಿ ಜೊತೆ ಜೊತೆ ಸೇತಿ ಹಣ ವಸೂಲಿ ಮಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ನವರನ್ನು ಬಳ್ಳಾರಿಯಲ್ಲಿ ಅಮಾನತು ಮಾಡಿದ ಒಂದು ವರೆ ತಿಂಗಳಲ್ಲಿ ಇಲಾಖೆಯ ವಿಚಾರಣೆ ಬಾಕಿ ಇಟ್ಟು ಹಾವೇರಿಗೆ ನೇಮಕ ಮಾಡಲಾಗಿದೆ.
ಕಲಾವಿದರಿಂದ ನಿಮಗೆ ಎರೆಡು ಕಾರ್ಯಕ್ರಮ ನೀಡಿದೆ. ಜಂಟಿ ನಿರ್ದೇಶಕರು ಹಣ ಕೇಳುತ್ತಿದ್ದಾರೆ ಕೊಡಿ ಎಂದು ಸಿರುಗುಪ್ಪ ತಾಲೂಕಿನ ಕಲಾವಿದನಿಂದ ಹಣ ಕೇಳುವ ಆಡಿಯೋ ಹೊರ ಬಿದ್ದಿತ್ತು. ಇದನ್ನು ಸಂಜೆವಾಣಿ ವಿವರವಾಗಿ ಸಾಕ್ಷಿ ಸಮೇತ ಫೆ.3 ರಂದು ಪ್ರಕಟಿಸಿತ್ತು.
ಈ ವರದಿ ಹಿನ್ನಲೆಯಲ್ಲಿ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರ ಮೌಖಿಕ ಆದೇಶದ ಮೇರೆಗೆ ಇಲಾಖೆಯ ಮೇಲಾಧಿಕಾರಿಗಳು ಸಿದ್ದಲಿಂಗೇಶ ರಂಗಣ್ಣನವನ್ನು ಇಲಾಖೆಯ ವಿಚಾರಣೆ ಆಗುವವರೆಗೆ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು. ಅಷ್ಟೇ ಅಲ್ಲದೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯ ಮೂವರು ಮಹಿಳೆಯರೂ ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆಂದು ಕೆಲಸದಿಂದ ವಜಾ ಮಾಡಲಾಗಿತ್ತು.
ಇಲಾಖೆ ವಿಚಾರಣೆ ನಡೆದಿಲ್ಲ, ಆದರೆ ಸಿದ್ದಲಿಂಗೇಶ ರಂಗಣ್ಣನವರನ್ನು ಅದೇ ಸಚಿವ ಸುನೀಲ್ ಕುಮಾರ್ ಅವರ ಆಪ್ತ ಕಾರ್ಯದರ್ಶಿ ಅವರ ಟಿಪ್ಪಣಿಯಂತೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇದೆಂದು. ಭ್ರಷ್ಟಾಚಾರದ ವಿಚಾರಣೆ ಬಾಕಿ ಇಟ್ಟು. ಹಾವೇರಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕಮಾಡಲು ಮಾ 15 ರಂದು ಆದೇಶ ಮಾಡಲಾಗಿದೆ.
ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇದ್ದರೆ ನೇಮಕಮಾಡಿಕೊಳ್ಳಬೇಕು. ಆದರೆ ಭ್ರಷ್ಟಾಚಾರದ ಆರೋಪ ಹೊತ್ತವರನ್ನು ಅಧಿಕಾರಿಗಳ ಕೊರತೆ ಎಂದು ಆರೋಪ ಮುಕ್ತ ಅಸಗುವ ಮುನ್ನ ಅಮಾನತು ಆದೇಶ ಹಿಂಪಡೆಯುವ ಈ ಸರ್ಕಾರದ ನಡೆ ಪ್ರಶ್ನಿಸುವಂತಾಗಿದೆ.
ಇನ್ನು ಸಿದ್ದಲಿಂಗೇಶ ಕೆ. ರಂಗಣ್ಣನವರ್ ಈ ಇಲಾಖೆಯ ನೌಕರನಲ್ಲ. ಅವರು ಉಪನ್ಯಾಸಕ ಹುದ್ದೆಯಿಂದ ಈ ಇಲಾಖೆಗೆ ಡೆಪ್ಯುಟೇಷನ್ ಮೇಲೆ ಬಂದವರು. ಈಗಾಗಲೇ ಧಾರವಾಡದಲ್ಲಿ ಒಮ್ಮೆ ಬಿಲ್ ಮಾಡುವ ವಿಚಾರದಲ್ಲಿ ಅಮಾನತು ಆಗಿ ಬಳ್ಳಾರಿಗೆ ಬಂದಿದ್ದರು. ಈಗ ಇಲ್ಲಿ ಕಲಾವಿದರಿಂದ ಹಣ ಸಂಗ್ರಹಿಸವ ಭ್ರಷ್ಟಾಚಾರ ಮಾಡಿ ಹಾವೇರಿಗೆ ನೇಮಕವಾಗಿದ್ದಾರೆ.
ಅದೂ ಸಿಎಂ ಅವರ ತವರು ಜಿಲ್ಲೆಗೆ. ಅಲ್ಲಿಯೂ ಇವರು ಭ್ರಷ್ಟಾಚಾರ ಮಾಡಲ್ಲ ಎಂಬ ಗ್ಯಾರೆಂಟಿ ಏನು.
ನಾವು ಏನು ಮಾಡಿದರೂ, ಮೇಲಾಧಿಕಾರಿಗಳಿಗೆ ಕೊಡುವುದನ್ನು ಕೊಟ್ಟರೆ, ನಮಗೆ ಯಾರೇನು ಮಾಡುತ್ತಾರೆ ಎಂಬ ಜಾಯಮಾನದ ಇಂತಹ ಅಧಿಕಾರಿಗಳು ಇರುವ ವರಗೆ ಭ್ರಷ್ಟಾಚಾರ ವನಗನು ತಡೆಯುತ್ತೇವೆ ಎಂಬ ಬಿಜೆಪಿ ಸರ್ಕಾರದ ಆಡಳಿತಕ್ಕೆ ಆರ್ಥಿಲ್ಲದಂತಾಗುತ್ತದೆ.
ಇಲಾಕೆ ತಮಗೆ ಬೇಕಾದ ಅಧಿಕಾರಿಗಳ ಹುದ್ದೆ ನೇಮಕ ಮಾಡಿಕೊಳ್ಳಲಾಗದೆ. ಅಧಿಕಾರಿಗಳ ಕೊರತೆ ಎಂದು ಇಂತಹ ಭ್ರಷ್ಟರನ್ನು ನೇಮಕ ಮಾಡಿಕೊಳ್ಳುವುದು ಯಾವ ನ್ಯಾಯ.
ಕೆ.ಜಗದೀಶ್
ರಂಗನಿರ್ದೇಶಕರು, ಬಳ್ಳಾರಿ.