ಬಳ್ಳಾರಿಯಲ್ಲಿ ಬೊಮ್ಮಾಯಿ ಭರ್ಜರಿ ರೋಡ್ ಶೋ


ಬಳ್ಳಾರಿ ಏ 29 : ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಸಂಜೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ಎಂದಿನಂತೆ ಬಿಸಿಲಿನ ತಾಪ ಇಲ್ಲದೆ ಮೋಡ ಮುಚ್ಚಿದ ವಾತಾವರಣದಲ್ಲಿ ನಗರದ ರಾಯಲ್ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಆರಂಭಗೊಂಡ ರೋಡ್ ಶೋ ಮುಂದೆ, ತಮಟೆ ಮಾದನ, ಡೊಳ್ಳು ಮೊದಲಾದ ವಾದ್ಯಗಳೊಂದಿಗೆ ಬಿಜೆಪಿ ಬಾವುಟಗಳನ್ನು ಬೀಸುತ್ತ, ಪಕ್ಷದ ಪರ, ಅಭ್ಯರ್ಥಿ ಪರ ಜಯ ಘೋಷಗಳನ್ನು ಕೂಗುತ್ತ ಸಾಗಿದರು.
ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ಕಾಳಮ್ಮ ಸರ್ಕಲ್, ಮೂಲಕ ಬ್ರೂಸ್ ಪೇಟೆ ತಲುಪಿತು.