ಬಳ್ಳಾರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ


ಬಳ್ಳಾರಿ: ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆ ಅಸ್ಸಾ ಮುಖ್ಯ ಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮ ನೇತೃತ್ವದಲ್ಲಿ ನಿನ್ನೆ(ಜ 14)ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು.
ಮೊದಲಿಗೆ ಕುರುಗೋಡು ನಂತರ ಕಂಪ್ಲಿ ಪಟ್ಟಣ, ಕೊಳಗಲ್ಲು ಮೊದಲಾದ ಗ್ರಾಮೀಣ ಪ್ರದೇಶ ಅಂತಿಮವಾಗಿ ಬಳ್ಳಾರಿ‌ನಗರದಲ್ಲಿ ಯಾತ್ರೆ ಸಾಗಿತು.

ನಗರದ ಕನಕ ದುರ್ಗಮ್ಮ‌ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಯಾತ್ರೆಯ ಬಸ್ ಕಲಾ ತಂಡಗಳ ಮೂಲಕ ಸಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂ ಚೆಲ್ಲಿ ಸ್ವಾಗತಿಸುತ್ತಿದ್ದರು.

ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಶ್ರೀರಾಮುಲು, ಮಾಜಿ ಸಿಎಂ, ಜಗದೀಶ್ ಶೆಟ್ಟರ್, ಶಾಸಕ ಸೋಮಶೇಖರ ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.