
ಬಳ್ಳಾರಿ, ಮಾ. ೭- ನಮ್ಮದೇನಿದ್ದರು ಫಲಾನುಭವಿಗಳಿಗೆ ಯೋಜನೆಗಳನ್ನು ಮುಟ್ಟಿಸಿದ ಪ್ರೋಗ್ರೆಸ್ ಕಾರ್ಡು ಕೊಡುತ್ತೇವೆ, ಕೆಲವರು ಚುನಾವಣೆ ಹತ್ತಿರ ಬಂದಾಗ ಕೊಡುತ್ತಿರುವ ಗ್ಯಾರೆಂಟಿ, ವಾರೆಂಟಿ ಕಾರ್ಡುಗಳನ್ನು ನಾವು ನೀಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ.
ಅವರು ಇಂದು ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಗ್ಯಾರೆಂಟಿ ಪದಕ್ಕೆ ಅರ್ಥವೇ ಗೊತ್ತಿಲದವರು ನಿಮಗೆ ಗ್ಯಾರೆಂಟಿ, ವಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಡಬಕ್ ಇಂಜಿನ್ ಸರ್ಕಾರದಲ್ಲಿ ಜಿಲ್ಲೆಯಲ್ಲಿನ ೨೩ ಸಾವಿರದ ೫೭೦ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ನಾಯಾಪೈಸೆ ಸೋರಿಕೆಯಾಗದ ರೀತಿಯಲ್ಲಿ ೧೬೪೯ ಕೋಟಿ ರೂ ಅನುದಾನ ಪಡೆದಿದ್ದಾರೆಂದು ತಿಳಿಸಿದರು.
ರೈತರಿಗೆ ವಾರ್ಷಿಕ ಆರು ಸಾವಿರದಂತೆ ನಾಲ್ಕು ಸಾವಿರ ಕೋಟಿ ರೂಗಳನ್ನು ಡಿಬಿಟಿ ಮೂಲಕ ನೀಡಿದೆ. ಈಬಾರಿ ಕಿಸಾನ್ ಕ್ರೆಡಿಕ್ ಕಾರ್ಡು ಇರುವ ರೈತರಿಗೆ ಹತ್ತು ಸಾವಿರ ರೂ ನೀಡುತ್ತದೆ ಎಂದರು.
ಫಸಲ ಭೀಮಾ ಯೋಜನೆ ಹಣ ರೈತರಿಗೆ ನೇರವಾಗಿ ತಲುಪುತ್ತದೆ. ಕೃಷ್ಣದೇವರಾಯ ಕಾಲ ಹೇಗೆ ಸುವರ್ಣ ಯುಗವಾಗಿತ್ತೋ. ಕಳೆದ ಎಂಟು ವರ್ಷದ ಮೋದಿ ಕಾಲವೂ ಸುವರ್ಣ ದಿನದ ಕಾಲವಾಗಿದೆ ಜನರು ಸರ್ಕಾರದ ಬಾಗಿಲಿಗೆ ಹೋಗೋದಲ್ಲ ಸರ್ಕಾರವೇ ಜನರ ಮನೆಗೆ ಬಾಗಿಲಿಗೆ ಬರಲಿದೆಂದರು. ಮೀಸಲಾತಿ ಹೆಚ್ಚಳ ವಿಚಾರ ಪ್ರಸ್ತಾಪ. ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಎಂದು ಸಮರ್ಥಿಸಿಕೊಂಡರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿ.
ಮೋದಿ ಅವರು ಪ್ರಧಾನಿ ಆದ ಮೇಲೆ ಜಲಜೀವನ ಕಾರ್ಯಕ್ರಮದ ಮೂಲಕ ಮನೆಗೂ ಶುದ್ದ ನೀರು ಬರುವಂತೆ ಮಾಡಿದ್ದಾರೆ. ನಮ್ಮ ದೇಶದ ಆರ್ಥಿಕ ಶಿಸ್ತು ಇತರೇ ದೇಶಗಳಿಗೆ ಮಾರ್ಗದರ್ಶಕವಾಗಿ ಎಂದರು.
ವೇದಿಕೆಯಲ್ಲಿ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಸಂಸದ ವೈ. ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಡಾ. ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಎಪಿಎಂಸಿ ಅಧ್ಯಕ್ಷ ಶ್ರೀಧರಗಡ್ಡೆ ಬಸವಲಿಂಗನಗೌಡ, ಮಾಜಿ ಸಂಸದೆ ಜೆ. ಶಾಂತಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.