ಬಳ್ಳಾರಿಯಲ್ಲಿ ನೂತನ ಮಾದರಿಯ ಬ್ಯಾರಿ ಕೇಡ್

ಬಳ್ಳಾರಿ, ಮೇ.30: ಪೊಲೀಸ್ ಇಲಾಖೆ ನಗರದಲ್ಲಿನ ಜನ ಮತ್ತು ವಾಹನಗಳ ಸಂಚಾರವನ್ನು ತಡೆಯಲು ಬಳಸುವ ಬ್ಯಾರಿಕೇಡ್‍ಗಳನ್ನು ನೂತನ ಮಾದರಿಯಲ್ಲಿ ಸಿದ್ದಪಡಿಸಿ ಬಳಸಿರುವುದು ನಗರದಲ್ಲಿ ಕಂಡು ಬಂದಿದೆ.
ಈ ಮೊದಲು ಬಳಸುತ್ತಿದ್ದ ಬ್ಯಾರಿಕೇಡ್‍ಗಳು ಹೆಚ್ಚಿನ ತೂಕದ್ದು ಮತ್ತು ಅವುಗಳನ್ನು ಒಂದಡೆಯಿಂದ ಮತ್ತೊಂದಡೆಗೆ ಸಾಗಿಸಲು ಹೆಚ್ಚನ ವಾಹನಗಳ ಅವಶ್ಯಕತೆ ಇತ್ತು.
ಆದರೆ ಈ ನೂತನ ಮಾದರಿಯ ಬ್ಯಾರಿಕೇಡ್‍ಗಳು ಶೆಟರ್‍ನಂತೆ ಮಡಿಚುವ ರೀತಿಯಲ್ಲಿ ಸಿದ್ದಪಡಿಸಿದ್ದು, ಬೇಕಾದಾಗ ಅದನ್ನು ಅಗಲಿಸಿ ಇರುವುದು, ಬೇಡವಾದಾಗ ಅದನ್ನು ಮಡಿಸಿ ಕಡಿಮೆ ಸ್ಥಳಾವಾಕಾಶದಲ್ಲಿ ಇಡಲು ಮತ್ತು ಸಾಗಿಸಲು ಬರುವಂತೆ ಮಾಡಲಾಗಿದೆ. ಇವುಗಳಿಗೆ ಹಳದಿ, ಕೆಂಪು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ.