
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ನಗರದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತುಂಗಭದ್ರ ಎಜುಕೇಷನ್ ಹೆಲ್ತ್ ಅಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ಸಂಸ್ಥೆಯ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯಿಂದ ಬಳ್ಳಾರಿಯಲ್ಲಿ ಕಿಷ್ಕಿಂದ ವಿಶ್ವ ವಿದ್ಯಾಲಯವನ್ನು ಆರಂಭಿಸಲಾಗುತ್ತಿದೆ.
ಈ ಕುರಿತು ಇಂದು ನಗರದ ಕುರಿಹಟ್ಟಿ ಬಳಿ ಇರುವ ಸಂಸ್ಥೆಯ ಬಿಬಿಎಂ ಕಾಲೇಜಿನ ಕಟ್ಟದಲ್ಲಿ ವ್ಯವಸ್ಥೆ ಮಾಡಿರುವ ನೂತನ ವಿವಿಯ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಮತ್ತು ವಿವಿಯ ಕುಲಪತಿ
ಡಾ.ಯಶವಂತ್ ಭೂಪಾಲ್ ವಿವಿಯ ಆರಂಭದ ಬಗ್ಗೆ ವಿವರ ನೀಡಿದರು.
ನಮ್ಮ ಸಂಸ್ಥೆ 1981 ರಲ್ಲಿ ಆರಂಭಗೊಂಡು ಈಗ ಇಂಜಿನೀಯರಿಂಗ್ ಸೇರಿದಂತೆ ವಿವಿಧ ಶಿಕ್ಷಣ ಕಾಲೇಜುಗಳನ್ನು ನಡೆಸುತ್ತಿದ್ದು ಈಗ ಖಾಸಗಿ ವಿವಿಯನ್ನು ಆರಂಭಿಸುತ್ತಿದೆ.
ಇಲ್ಲಿಗೆ 26 ಕಿಲೋ ಮೀಟರ್ ದೂರದ ಸಿಂದಗೇರಿ ಬಳಿ 50 ಎಕರೆ ಪ್ರದೇಶದಲ್ಲಿ 100 ಕೋಟಿ ರೂ ವೆಚ್ಚದಲ್ಲಿ ವಿವಿಯ ಕಟ್ಟಡ ನಿರ್ಮಾಣ ಮಾಡುತ್ತಿದೆ.
ಸುಸಜ್ಜಿತವಾದ ಕಟ್ಟಡದ ಜೊತೆಗೆ ಪ್ರಯೋಗಾಲಯ, ಆಡಳಿತ ಭವನ, ಗ್ರಂಥಾಲಯ, ವಸತಿ ಸೌಕರ್ಯ, ಆಟದ ಮೈದಾನ ಹಾಗೂ ಮಕರ ಸೌಲಭ್ಯಗಳನ್ನು ನಿರ್ಮಿಸಲಾಗುವುದು. 2025-26 ನೇ ಶೈಕ್ಷಣಿಕ ವರ್ಷದಿಂದ ಅಲ್ಲಿಯೇ ವಿ.ವಿ. ಕಾರ್ಯನಿರ್ವಹಿಸಲಿದೆಂದು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ಸೇರಿದಂತೆ 540 ಇಂಜಿನೀಯರಿಂಗ್ ಸೀಟ್ ಪ್ರವೇಶಕ್ಕೆ ಅನುಮತಿ ಪಡೆದಿದೆ. ಬಿಐಟಿಎಂಗೂ ಈ ವಿವಿಗೂ ಸಂಬಂಧ ಇಲ್ಲ ಅದು ವಿಟಿಯುನಡಿ ಮುಂದುವರೆಯುತ್ತೆಂದು ನಮ್ಮ ಸಂಸ್ಥೆಯ ಯಾವುದೇ ಶಿಕ್ಷಣ ಶಾಲಾ ಕಾಲೇಜು ಇದರಡಿ ಬರಲ್ಲ ಎಂದರು.
ಕಳೆದ ಐದು ವರ್ಷಗಳ ಪ್ರಯತ್ನ ಇದು. ಕಳೆದ ಸರ್ಕಾರದ ಅವಧಿಯಲ್ಲಿ ಪ್ರಕ್ರಿಯೆ ನಡೆದು. ಈ ಸರ್ಕಾರದ ರಾಜ್ಯದಲ್ಲಿ ಈ ವರ್ಷ ಅನುಮತಿ ನೀಡಿದ 8 ಖಾಸಗಿ ವಿವಿಗಳಲ್ಲಿ ನಮ್ಮದೂ ಒಂದು ನೂತನ ನಮ್ಮ ವಿವಿಯ ಸಿಇಟಿ ಕೋಡ್ ಇ-301 ಇದೆಂದರು.
ಇಂದಿನ ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ದಿನಗಳಲ್ಲಿ ಉತ್ಕೃಷ್ಟವಾದ ಜ್ಞಾನ, ಚಿಂತನೆ, ಸೃಜನಶೀಲತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ದೃಷ್ಟಿಕೋನ ಹೊಂದಿದೆ.
ಪೋಷಕರು ಉತ್ತಮ ಮತ್ತು ಮಕ್ಕಳಿಗೆ ಉದ್ಯೋಗ ಅವಕಾಶ ದೊರಕಿಸಿಕೊಡಬಲ್ಲ ಅಶಿಕ್ಷಣ ಸಂಸ್ಥೆಗಳನ್ನು ಬಯಸುತ್ತಿದ್ದು ಅವರ ಆಶಯವನ್ನು ನಮ್ಮನೂತನ ವಿವಿಯು ಪೂರೈಸುವ ನಿಟ್ಟಿನಲ್ಲಿ ಕೆಲಸಮಾಡಲಿದೆಂದರು.
ಈಗಾಗಲೇ ಬಳ್ಳಾರಿ ಇಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್, ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಮೊದಲಾದ ಶಾಲಾ ಕಾಲೇಜುಗಳು. ಉತ್ತಮ ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶದೊಂದಿಗೆ ಹೆಚ್ಚಿನ ಪ್ಲೇಸ್‌ಮೆಂಟ್ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಸರುವಾಸಿಯಾಗಿವೆಂದರು.
ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರದ ಯುಜಿಸಿಯಿಂದ ಅನುಮೋದನೆಗೊಂಡು, ಆಲ್ ಇಂಡಿಯಾ ಯುನಿವರ್ಸಿಟಿ ಅಸೋಸಿಯೇಷನ್ ನಲ್ಲಿ ನೊಂದಾಯಿಸಿಕೊಂಡಿದೆ
ಕೇಂದ್ರ ಸರ್ಕಾರದ ಚಿಂತನೆಯಂತೆ ಹೊಸ ಎನ್.ಇ.ಪಿ ಆಧಾರದ ಮೇಲೆ ಕೋರ್ಸ್ ಗಳು ನಡೆಯಲಿವೆಂದರು.
ಟ್ರಸ್ಟಿಗಳಾದ ಪೃಥ್ವಿರಾಜ್ ಭೂಪಾಲ್ ಡಾ.ಎಸ್.ಜೆ.ವಿ.ಭರತ್, ಸಂಸ್ಥೆಯ ಆಡಳಿತಾಧಿಕಾರಿ ಅಮರೇಶಯ್ಯ ಮೊದಲಾದವರು ಇದ್ದರು.