ಬಳ್ಳಾರಿಯಲ್ಲಿ ಇದುವರೆಗೆ 2.60ಲಕ್ಷ ಜನರಿಗೆ ಲಸಿಕೆ

ಬಳ್ಳಾರಿ ಏ 11 : 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ತಪ್ಪದೇ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡು ಕೊರನಾ ವೈರಸ್ ನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅನಿಲ್ ಕುಮಾರ್‌ ಹೇಳಿದರು.

ಇಂದಿನಿಂದ ಎ 14ರವರೆಗೆ ಹಮ್ಮಿಕೊಂಡಿರುವ ಲಸಿಕಾ ಉತ್ಸವಕ್ಕೆ
ಬಳ್ಳಾರಿ ನಗರದ ಆಶ್ರಯ ಕಾಲೋನಿ ನಗರ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿರುವ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೊರಿದರು.
ಇಲ್ಲಿಯವರೆಗೆ 45-60 ವರ್ಷದೊಳಗಿನ 1 ಲಕ್ಷ ದ 22 ಸಾವಿರ 6, ಹಾಗೂ 60 ವರ್ಷ ಮೇಲ್ಪಟ್ಟ 1 ಲಕ್ಷದ 12 ಸಾವಿರದ 654, ಆರೋಗ್ಯ ಇಲಾಖೆಯ 16‌ಸಾವಿರದ 899 ಮತ್ತು ಇತರ ಮುಂಚೂಣಿ ಇಲಾಖೆಯ 8 ಸಾವಿರದ 374 ಜನ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.