ಬಳ್ಳಾರಿಯನ್ನು  ನಾಟಕದ ಆಲಯವಾಗಿ ಸೃಷ್ಟಿಸಿದ ಕೀರ್ತಿ: ಡಿಆರ್ಕೆಗೆ ಸೇರಿದ್ದು


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜ 30 : ಧರ್ಮವರಂ ರಾಮಕೃಷ್ಣಮಾಚಾರ್ಯಲು ಅವರು ಬಳ್ಳಾರಿಯನ್ನು ನಾಟಕದ ಆಲಯವಾಗಿ ಸೃಷ್ಟಿಸಿದ ಕೀರ್ತಿ ಪಡೆದವರೆಂದು  ಡಾ. ಇಂಚರ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ಡಿ.ಆರ್‌.ಕೆ ರಂಗಸಿರಿಯ ಬಿ.ಜಿ ಸಭಾಂಗಣದಲ್ಲಿ ಧರ್ಮವರ ರಾಮಕೃಷ್ಣಮಾಚಾರ್ಯಲು ಮೆಮೊರಿಯಲ್ ಎಂಡೋಮೆಂಟ್ ಟ್ರಸ್ಟ್.  ನಗರದ  ಡಿ. ಆರ್. ಕೆ. ರಂಗಸಿರಿ  ಟ್ರಸ್ಟ್  ಸಹಯೋಗದಲ್ಲಿ
ಆಂಧ್ರ ನಾಟಕ(ಕವಿತಾ)ಪಿತಾಮಹ ಧರ್ಮವರ ರಾಮಕೃಷ್ಣಮಾಚಾರ್ಯಲು  ರಚಿಸಿದ ನಾಟಕಗಳ ಕುರಿತು ವಿಚಾರ ಸಂಕೀರ್ಣ, 137 ವರ್ಷಗಳ ಹಿಂದಿನ  ಚಿತ್ರನಳೀಯಂ ನಾಟಕದ ಪ್ರಸ್ತುತತೆ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು.
ಜನಪದ ಸಂಸ್ಕೃತಿ ಇವತ್ತಿಗೂ ಮೂಲಬೇರು. ಅದು  ಕಲೆ, ನಾಟಕ, ಪಠ್ಯ ವಸ್ತುವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಬೇಕೆಂದರು.
ಅಧ್ಯಕ್ಷತೆವಹಿಸಿದ್ದ ನಿವೃತ್ತ ಉಪನ್ಯಾಸಕರಾದ ಡಾ. ಕೆ ಸುರೇಂದ್ರಬಾಬು, ಧರ್ಮವರ ರಾಮಕೃಷ್ಣಮಾಚಾರ್ಯಲು ಅವರ ನಾಟಕಗಳು ಕಲಾವಿದರಿಗೆ ನೀತಿ ನಿಯಮ ವ್ಯಕ್ತಿತ್ವ ಹೇಗಿರಬೇಕು ಎಂಬುದನ್ನು ತಿಳಿಸುತ್ತವೆ.  ಸಂದೇಶದ ಜೊತೆಗೆ ಸಾಹಿತ್ಯ ಛಂದಸ್ಸು ಬಹು ಮುಖ್ಯವಾಗಿ ನೋಡಬಹುದೆಂದರು.
ಆಗಿನ ಕಾಲದಲ್ಲಿ  ಸಂಗೀತವನ್ನು ನಾಟಕಗಳಲ್ಲಿ ಮೊಟ್ಟಮೊದಲನೆಯದಾಗಿ  ಸೇರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಇವರ ನಾಟಕಗಳಲ್ಲಿ ಕವಿತಾರೂಪದ ಸಂಭಾಷಣೆಗಳು ಮತ್ತು  ಪ್ರತಿಯೊಂದು ನಾಟಕದಲ್ಲಿ ಹರಿದಂಡಕವನ್ನು ಕೊನೆಗೆ ಹಾಡುತ್ತಿದ್ದರು ಎಂದು ಡಿ ಆರ್ ಕೆ ಕುಟುಂಬದ  ಡಿ ಎನ್ ಜಯಂತ್ ರವರು ಹೇಳಿದರು.
 ಬಡ ಕುಟುಂಬದಿಂದ ಬಂದು ಸಾಹಿತ್ಯ, ನಾಟಕ, ಸಂಗೀತದಲ್ಲಿ ಶ್ರೀಮಂತರಾದವರು ಧರ್ಮವರ ರಾಮಕೃಷ್ಣಮಾಚಾರ್ಯಲು ಇವರ ನಾಟಕಗಳಲ್ಲಿ ಸಾಹಿತ್ಯ ಪ್ರಮುಖವಾಗಿದ್ದು. ನಟನ ಬಗ್ಗೆ ಮತ್ತು ಅವರಿಗಿರುವ ಗುಣಗಳ ಬಗ್ಗೆ ವಿಶೇಷವಾಗಿ ಬರೆದಿದ್ದಾರೆ ಎಂದು ಹಿರಿಯ ರಂಗಭೂಮಿ ಕಲಾವಿದ ಜಿ. ಆರ್. ವೆಂಕಟೇಶಲು  ಹೇಳಿದರು.
ನಂತರ ಸುಗಮ ಸಂಗೀತ, ರಂಗಗೀತೆ ಮತ್ತು ಜಾನಪದ ಗೀತೆಗಳನ್ನು ರಾಘವೇಂದ್ರ ಗುಡದೂರು, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ವಿಜಯೇಂದ್ರ ಕೆ. ಪ್ರಸ್ತುತಪಡಿಸಿದರು.
ಸ್ವಾಗತ ಚಂದ್ರಶೇಖರ, ಪ್ರಾರ್ಥನೆ ರಾಘವೇಂದ್ರ ಗುಡುದೂರು, ವಂದನಾರ್ಪಣೆ ಪ್ರಕಾಶ, ನಿರೂಪಣೆ ವಿಷ್ಣು ಹಡಪದ ನೆರವೇರಿಸಿದರು.

 ಡಿಆರ್ ಕೆ ರಂಗಸಿರಿಯ ಸಂಸ್ಥಾಪಕ ಡಿ. ಮಹೇಂದ್ರ ನಾಥ್, ಗಣೇಶ, ನೇತಿ ರಘುರಾಮ, ವೆಂಕೋಬಾಚಾರಿ, ಗಂಗಣ್ಣ, ರಮಣಪ್ಪ ಬಜಂತ್ರಿ ಮತ್ತಿತರರು ಇದ್ದರು.