
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,29- ಇಲ್ಲಿನ ಜೀನ್ಸ್ ಉದ್ಯಮವನ್ನು ಪಾದಯಾತ್ರೆ ಸಂದರ್ಭದಲ್ಲಿ ಕಂಡಿರುವೆ. ನಿಮ್ಮ ಸಮಸ್ಯೆ ಅರಿತಿರುವೆ.
ರಾಜ್ಯದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದು ಸರ್ಕಾರವನ್ನು ರಚನೆ ಮಾಡಿದಲ್ಲಿ. ಬರುವ ಐದು ವರ್ಷದಲ್ಲಿ ಐದು ಸಾವಿರ ಕೋಟಿಯಲ್ಲಿ ನಗರದಲ್ಲಿ ಜೀನ್ಸ್ ಇಂಡಸ್ಟ್ರೀಸ್ ಪಾರ್ಕ್ ಮಾಡಿ. ಮೇಡ ಇನ್ ಬಳ್ಳಾರಿ ಜೀನ್ಸ್ ಎಂಬಂತೆ ಮಾಡಿ ಇದನ್ನು ಜೀನ್ಸ್
ರಾಜಧಾನಿ ಮಾಡುವ ಸಂಕಲ್ಪ ನನ್ನದು ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಗರದ ಟಿ.ಬಿ.ಸ್ಯಾನಿಟೋರಿಯಂನಿಂದ ಕೌಲ್ ಬಜಾರ್ ಮುಖ್ಯ ಬೀದಿಯಲ್ಲಿ ಗ್ರಾಮೀಣ ಅಭ್ಯರ್ಥಿ ಬಿ.ನಾಗೇಂದ್ರ, ನಗರ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಜೊತೆಯಲ್ಲಿ ರೋಡ್ ಶೋ ನಡೆಸಿ. ನಂತರ ಮೋತಿ ಸರ್ಕಲ್ ನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಳ್ಳಾರಿಯಲ್ಲಿ ಜಿನ್ಸ್ ಪಾರ್ಕ್ ಕೆಲಸವನ್ನು ಸರ್ಕಾರ ಬಂದ ತಕ್ಷಣ ಸಿಎಂ ಗೆ ಹೇಳಿ ಮಾಡಿಸಲಿದೆ ಇದು ನನ್ನ ವಯಕ್ತಿಕ ಆಶಯ. ಮತ್ತೆ ನಾನು ಬಳ್ಳಾರಿಗೆ ಬರುವೆ. ಅದು ಜಿನ್ಸ್ ಪಾರ್ಕ್ ಉದ್ಘಾಟನೆಗೆ ಬರುವ ಐದು ವರ್ಷದಲ್ಲಿ ಬಳ್ಳಾರಿ ಜೀನ್ಸ್ ಕ್ಯಾಪಿಟಲ್ ಆಪ್ ಇಂಡಿಯಾ ಆಗಲಿದೆಂದರು.
40 ಕ್ಕೆ ನಿಲ್ಲಿಸಿ:
ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಬೇಕೆಂದು ನೀವು ನಿರ್ಧಾರ ಮಾಡಬೇಕಿದೆ. ರಾಜ್ಯದಲ್ಲಿ ಬಿಜೆಪಿಯು ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿತ್ತು. ನಂತರ ಶೇ 40 ರಷ್ಟು ಕಮೀಷನ್ ಪಡೆಯಿತು. ಅವರಿಗೆ 40 ನಂಬರ್ ಬಹಳ ಇಷ್ಟ ಇದೆ. ಅದಕ್ಕಾಗಿ ಅದೇ ನಂಬರ್ಗೆ ಅವರನ್ನು ನಿಲ್ಲಿಸಿ ಎಂದರು.
ಗ್ಯಾರೆಂಟಿಗಳು:
ಗೃಹಲಕ್ಷಿ ಸೇರಿದಂತೆ ಗ್ಯಾರೆಂಟಿಗಳನ್ನು ತಿಳಿಸಿದರು ಸರ್ಕಾರ ರಚನೆಯಾದ ಮರುದಿನದ ಸಚಿವ ಸಂಪುಟದಲ್ಲಿ ಇವನ್ನು ಘೋಷಣೆ ಆಗಲಿದೆಂದರು.
ಬದಲಾವಣೆ ಬಯಸಿ:
ಈಹಿಂದೆ ಭ್ರಷ್ಟಾಚಾರದ ಕೇಂದ್ರ ಬಳ್ಳಾರಿಯಾಗಿತ್ತು. ದೇಶದಲ್ಲಿಯೇ ಹೆಚ್ಚು ಪ್ರಾಕೃತಿಕ ಸಂಪತ್ತನ್ನು ಕೊಳ್ಳೆಹೊಡೆದಿತ್ತು. ಅದಕ್ಕಾಗಿ ಬಳ್ಳಾರಿಯಲ್ಲಿ ಬದಲಾವಣೆ ಬಯಸಿ.
ಚುನಾವಣೆಯಲ್ಲಿ ಅಷ್ಟೇ ಅಲ್ಲ ನಿಮ್ಮ ಜೀವನದಲ್ಲೂ ಆಗಬೇಕೆಂದರು.
ಸುಳ್ಳು ಹೇಳ್ತಾರೆ:
ಮೋದಿ ಎಲ್ಲಿಗೆ ಹೋಗಲಿ ಅಲ್ಲಿ ಸುಳ್ಳು ಹೇಳ್ತಾರೆ. 15 ಸಾವಿರ ರೂ ನಿಮ್ಮ ಅಕೌಂಟ್ ಗೆ ಬೀಳಲಿಲ್ಲ. ಕಪ್ಪು ಹಣಕ್ಕಾಗಿ ನೋಟ್ ಬ್ಯಾನ್ ಮಾಡಿದರು. ಏನಾಯ್ತು ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರೇ ಹೇಳಿದ್ದರು 2500 ಕೋಟಿಗೆ ಸಿಎಂ ಹುದ್ದೆ ಖರೀದಿ ಮಾಡಬಹುದೆಂದು ದೇಶದಲ್ಲಿಯೇ ಭ್ರಷ್ಟಾಚಾರದ ಸರ್ಕಾರ ಕರ್ನಾಟಕದ್ದಾಗಿದೆಂದರು.
371 ಜೆ:
ಕಲ್ಯಾಣ ಕರ್ನಾಟಕದಲ್ಲಿ 371 ಜೆ. ಜಾರಿಗೆ ತಂದಿದ್ದು ಕಾಂಗ್ರೆಸ್. ಇದಕ್ಕೆ ಬಿಜೆಪಿಯ ವಾಜಪೇಯಿ, ಅಡ್ವಾನಿ ವಿರೋದಿಸಿದ್ದರೆಂದರು. 371 ಜೆ ಜಾರಿಯಿಂದ 50 ಸಾವಿರ ಈ ಭಾಗದ ಜನರಿಗೆ ಉದ್ಯೋಗ ದೊರೆತಿದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಬ್ಯಾಸದ ಲಾಭ ದೊರೆತಿದೆಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 50 ಸಾವಿರ ಹುದ್ದೆ ಭರ್ತಿ ಮಾಡಲಿದೆಂದರು.
ಪ್ರೀತಿಯ ಅಂಗಡಿ:
ಬಿಜೆಪಿ ಹಿಂಸೆ ಪ್ರಚೋದನೆ ಮಾಡುತ್ತದೆ. ದೇಶದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿರುವೆ. ಬಸವಣ್ಣ ಮೊದಲಾದ ಮಹಾ ಪುರುಷರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ನಡೆಯುತ್ತದೆಂದರು. ಆಜಾನ್ ಕೂಗಿದ್ದರಿಂದ ಮಾತನಾಡುವುದನ್ನು ಕೆಲಕಾಲ ನಿಲ್ಲಿಸಿದರು. ತುಂತುರುಮಳೆಯಲ್ಲೇ ಭಾಷಣ ನಡೆಸಿದ್ದರು.
ಆಶಿರ್ವಾದ ಮಾಡಿ:
ನಗರ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಮಾತನಾಡಿ ತಂದೆತಾಯಿ ಮಾಡಿದ ಪುಣ್ಯ ಎಂದು ಭಾವಿಸುವೆ. ಕಾರಣ ಎಐಸಿಸಿ ನಾಯಕಿ ಸೋನಿಯಾ ಗೆದ್ದ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು. ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಸ್ಥಾನಗಳನ್ನು ಗೆಲ್ಲಿಸಲಿದೆಂದರು. ಭ್ರಷ್ಟಾಚಾರ ಮುಕ್ತ ಬಳ್ಳಾರಿಯನ್ನು ನಿರ್ಮಿಸಲು ನನಗೆ ಆಶಿರ್ವಾದ ಮಾಡಿ ಎಂದರು.
ಗಢ, ಗಢ:
ಗ್ರಾಮೀಣ ಅಭ್ಯರ್ಥಿ ಬಿ.ನಾಗೇಂದ್ರ ಮಾತನಾಡಿ, ಬಿಜೆಪಿ ಈ ಬಾರಿ ಗಡ, ಗಡ ನಡುಗಿದೆ. ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯಲು ತಾವು ಪಣತೊಡಿ ಎಂದರು.
1999ರಂತೆ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆಂದರು.
ಪಕ್ಷದ ಮುಖಂಡರಾದ ಸುರ್ಜಿವಾಲಾ, ಅಲ್ಲಂ ವೀರಭದ್ರಪ್ಪ. ವಿ.ಎಸ್.ಉಗ್ರಪ್ಪ, ಅಲ್ಲಂ ಪ್ರಶಾಂತ್ , ಆಂಜನೇಯಲು, ಮೊದಲಾದವರು ಇದ್ದರು.
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.