ಬಳ್ಳಾರಿಗೆ ಲಗ್ಗೆ ಇಟ್ಟ ಕಾಂಗ್ರೆಸ್ ಶಾಸಕರು

ಬಳ್ಳಾರಿ ಏ 24 : ನಡೆಯುತ್ತಿರುವ ಪಾಲಿಕೆ ಚುನಾಚಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರದ ಶಾಸಕರು ‌ನಗರಕ್ಕೆ ಲಗ್ಗೆ ಇಟ್ಟಿದ್ದಾರೆ.
ನಿನ್ನೆ ದಿನ‌ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಕಂಪ್ಲಿ ಶಾಸಕ‌ ಗಣೇಶ್, ಸಂಡೂರು‌ ಶಾಸಕ ತುಕರಾಂ ಪಕ್ಷದ ಅಭ್ಯರ್ಥಿಗಳೊಂದಿಗೆ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದ್ದಾರೆ. ಇವರ ಪ್ರಚಾರ ಅಭ್ಯರ್ಥಿಗಳ ಗೆಲುವಿಗೆ ಎಷ್ಟು ಸಹಕಾರ ಆಗುತ್ತೆ ಎಂಬುದನ್ನು ಫಲಿತಾಂಶದಿಂದ ತಿಳಿಯಬೇಕಿದೆ.