ಬಳ್ಳಾರಿಗೆ ಬಂದ 1800 ಟನ್ ರಸಗೊಬ್ಬರ

ಬಳ್ಳಾರಿ, ಜೂ.07: ರೈತರಿಗೆ ಬೇಕಾದ ಯೂರಿಯ ಗೊಬ್ಬರ ನಮ್ಮ, ಅಧಿಕಾರಿಗಳ ಕೋರಿಕೆಯ ಮೇರೆಗೆ (1800 ಟನ್ ಯೂರಿಯ) ಇಂದು ಬಳ್ಳಾರಿ ಗೂಡ್ಸ್ ಶೆಡ್ ಗೆ ವ್ಯಾಗಿನ್ ಮುಖಾಂತರ ಬಂದಿರುತ್ತದೆ. ಇದರ ಪ್ರಯುಕ್ತ ಕಾರ್ಮಿಕರಿಗೆ, ಲಾರಿ ಡೈವರ್, ಕ್ಲೀನರ್ ಗಳಿಗೆ ಸತತ 10ನೇ ಬಾರಿ ಊಟದ ವ್ಯವಸ್ಥೆ ಮತ್ತು ಹಣ್ಣು ಹಂಪಲು ಮತ್ತು ಮಾಸ್ಕ್, ಸ್ಯಾನಿಟೇಜರ್ ಗಳನ್ನು ನೀಡುತ್ತಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಬಿಜೆಪಿಯ ಬಳ್ಳಾರಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಗಣಪಾಲ್ ಐನಾಥರೆಡ್ಡಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಸಿ.ಜಿ.ಎಸ್.ಆರ್. ಲಕ್ಷ್ಮಿನಾರಾಯಣ, ಹೆಲ್ಪರ್ ಕೃಷ್ಣ ಮತ್ತು ನಾಗಾರ್ಜುನ ಕಂಪನಿ ಜೋನಲ್ ಮ್ಯಾನೇಜರ್ ವೆಂಕಟೇಶ್ವರೆಡ್ಡಿ, ಸಂತೋಷ, ಗೋವಿಂದರೆಡ್ಡಿ, ವೇರ್ ಹೌಸಿಂಗ್ ಕಂಪನಿಯ ವ್ಯವಸ್ಥಾಪಕರಾದ ರಾಮರೆಡ್ಡಿ, ಸುದರ್ಶನ ಸಿಬ್ಬಂದಿ ವರ್ಗ ಮತ್ತು ಗಿರಿಗೋವಿಂದರೆಡ್ಡಿ ಇನ್ನಿತರ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.