ಬಳ್ಳಾರಿಗೆ ಬಂದೋದ ಸಚಿವ ಭೈರತಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮೇ 14 : ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ನಿನ್ನೆ ನಗರಕ್ಕೆ ಬಂದು ಹೋಗಿದ್ದಾರೆ.
ನಗರಕ್ಕೆ ಬಂದವರು ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಮೇಯರ್  ರಾಜೇಶ್ವರಿ, ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಮುಖಂಡ ಕೆ.ಹೊನ್ನಪ್ಪ ಮತ್ತು ಅಧಿಕಾರಿಗಳ ಜೊತೆ ದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡ ಕೆ.ರಾಮಕೃಷ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಜೀವೇಶ್ವರಿ ಅವರ ಪುತ್ರನೊಂದಿಗೆ ವಿವಾಹ ನಿಶ್ಚಯ ಮಾಡಲು ಸಚಿವ ಆಗಮಿಸಿದ್ದರಂತೆ.
ಸಚಿವರು ನಗರಕ್ಕೆ ಬಂದರೂ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ನೋಡಿಕೊಂಡಿರುವುದು ಮಾತ್ರದ ಸೋಜಿಗದ ಸಂಗತಿಯಾಗಿದೆ.
ಸಣ್ಣ ಪುಟ್ಟದಕ್ಕೂ ಪ್ರಚಾರ ಬಯಸುವ ಬಿಜೆಪಿಯವರು ಈ ರೀತಿ ಮಾಡಿದ್ದು ಅಚ್ಚರಿ ಮೂಡಿಸಿದೆ.
ಸಚಿವರು ಮಾಧ್ಯಮಗಳಿಗೆ ಸಿಕ್ಕಿದ್ದರೆ. ನಗರದಕ್ಕೆ 24×7 ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಸ್ಥಳದಲ್ಲೇ ನೀರು ಬರದಿರುವುದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಅಲ್ಲದೆ ಬುಡಾದ ವಿವಿಧ ಯೋಜನೆಗಳ ಬಗ್ಗೆಯೂ ಅರಿಯಬಹುದಿತ್ತು. 

Attachments area