ಬಳ್ಳಾರಿಗೂ ಬಂತು ಕ್ಲಾರಿಟಿ ಡಯೋಗ್ನಾಸ್ಟಿಕ್

ಬಳ್ಳಾರಿ, ಜ.09: ರಾಜ್ಯದ ರಾಯಚೂರು, ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಾರಿಟಿ ಡಯಾಗ್ನಾಸ್ಟಿಕ್ಸ್ ತ್ವರಿತವಾಗಿ ಸ್ಕ್ಯಾನಿಂಗ್ ವರದಿಯನ್ನು ನಿಖರವಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ಇದೀಗ ಇದರ ಮತ್ತೊಂದು ಕೇಂದ್ರ ಬಳ್ಳಾರಿ ನಗರದಲ್ಲಿ ನಾಳೆಯಿಂದ ಕಾರ್ಯಾರಂಭ ಮಾಡುತ್ತಿದೆ.
ಈ ಬಗ್ಗೆ ನಗರದ ಪತ್ರಿಕಾ ಭವನದಲ್ಲಿ ಇಂದು ಸಂಸ್ಥೆಯ ಅಧ್ಯಕ್ಷ ಡಾ|| ಮಲ್ಲಿಕಾರ್ಜುನ, ನಿರ್ದೇಶಕರುಗಳಾದ ಡಾ|| ಪ್ರವೀಣ್ ರೆಡ್ಡಿ, ಡಾ|| ರಾಕೇಶ್, ಡಾ|| ಅಕರ್ಷ, ಲಕ್ಷ್ಮೀರೆಡ್ಡಿ, ಶ್ರೀನಿವಾಸುಲು ಮೊದಲಾದವರು ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.
ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ ರೋಗದ ಲಕ್ಷಣ ನಿಖರತೆ ಮುಖ್ಯವಾಗಿದೆ. ಅದಕ್ಕಾಗಿ ಡಯಾಗ್ನಸ್ಟಿಕ್ಸ್ ಸಂಸ್ಥೆಗಳ ಕಾರ್ಯ ಮುಖ್ಯವಾಗಿದೆ. ಆಧುನಿಕ ತಂದ್ರಜ್ಞಾನದೊಂದಿಗೆ 3 ಟೆಲ್ಸ್ ಎಂಬ ತಂತ್ರಜ್ಞಾನದ ಸ್ಕ್ಯಾನಿಂಗ್ ಯಂತ್ರದ ಮೂಲಕ ನರರೋಗ, ಕೀಲುಬೇನೆ, ಮೆದುಳು ಬೇನೆ, ಮೆದುಳು ರೋಗ, ಸ್ತನ ಕ್ಯಾನ್ಸರ್, ಮೊದಲಾದ ಕ್ಯಾನ್ಸರ್ ಪತ್ತೆ ಹಚ್ಚಲಾಗುವುದು.
ಈ ವರೆಗೆ ಬೆಂಗಳೂರು, ಹೈದ್ರಾಬಾದ್ ಗೆ ಹೋಗಿ ಮಾಡಿಸಿಕೊಳ್ಳಲಾಗುತ್ತಿದ್ದ ಸ್ಕ್ಯಾನಿಂಗ್ ನ್ನು ಇಲ್ಲಿಯೇ ಮಾಡಲಿದೆ.
ಹೃದಯ ಬಡಿತ, ಸ್ಟ್ರೋಕ್ ಪತ್ತೆಗಾಗಿ ವಿಶೇಷ ಯಂತ್ರೋಪಕರಣದೊಂದಿಗೆ ದಿನದ 24 ತಾಸು ಕಾರ್ಯನಿರ್ವಹಿಸಲಿದೆ. ಇದಕ್ಕೆ ಶುಲ್ಕವೂ ಸಹ ಇತರೆಡೆಗಳಿಗಿಂತ ಕಡಿಮೆ ವಿಧಿಸಲಿದೆಂದು ತಿಳಿಸಿದರು.
ನಾಳೆ ಬೆಳಿಗ್ಗೆ 10 ಗಂಟೆಗೆ ಗಾಂಧಿನಗರದಲ್ಲಿನ ಕೇಂದ್ರವನ್ನು ಕೇಂದ್ರದ ಬಿಜೆಪಿ ನಾಯಕಿ ದಗ್ಗುಪಾಟಿ ಪುರಂದರೇಶ್ವರಿ ಉದ್ಘಾಟಿಸಲಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ.ಸತ್ಯಕುಮಾರ್, ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಶಾಸಕರುಗಳಾದ ಬಿ.ನಾಗೇಂದ್ರ, ಗಾಲಿ ಸೋಮಶೇಖರರೆಡ್ಡಿ, ಕೆ.ಸಿ.ಕೊಂಡಯ್ಯ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.