ಬಳ್ಳಾರಪ್ಪ ಕಾಲೋನಿ ಸಮೀಪದ ಹಳ್ಳಕ್ಕೆ
ಸೇತುವೆ ನಿರ್ಮಾಣ ಮಾಡಲು ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ, ಜು.25: ನಗರದ ವಾರ್ಡ್ ನಂ:05, ಬಳ್ಳಾರಪ್ಪ ಕಾಲೋನಿಯ ಕೊನೆ ಭಾಗದಲ್ಲಿಹಳ್ಳದ ಮೇಲೆ 10 ಅಡಿ ಸೇತುವೆ ನಿರ್ಮಾಣ ಮಾಡಿ, ಸುತ್ತ-ಮುತ್ತಲಿನ ಕಾಲೋನಿಯ ನಿವಾಸಿಗಳಿಗೆ/ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಯುವಸೇನ ಸೊಶಿಯಲ್ ಯ್ಯಾಕ್ಷನ್ ಕ್ಲಬ್ ಮನವಿ ಮಾಡಿದೆ.
ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಈ ಕುರಿತಂತೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ಬಳ್ಳಾರಪ್ಪ ಕಾಲೋನಿಯ ನಿವಾಸಿಗಳು ಕಳೆದ 20 ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಪಾಲಿಕೆ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಕಾಲೋನಿಯಕೊನೆಯಲ್ಲಿ ಬರುವಂತಹಹಳ್ಳದ ಮೇಲೆ ಸೇತುವೆ ನಿರ್ಮಾಣ ಮಾಡಬೇಕೆಂದುಇಲ್ಲಿನ ನಿವಾಸಿಗಳು ಅನೇಕ ಮನವಿ ಪತ್ರಗಳನ್ನು ನೀಡಿದ್ದಾರೆ. ಆದರೆ ಈ ವಿಷಯದ ಬಗ್ಗೆ ಯಾರೂಕೂಡ ಸ್ಪಷ್ಟವಾಗಿ ಸ್ಪಂಧಿಸಿರುವುದಿಲ್ಲ. ತದನಂತರ ಯುವ ಸೇನೆಯ ವತಿಯಿಂದ ಮನವಿ ಪತ್ರದ ಮೂಲಕ ಮಾಡಿಕೊಂಡಿದ್ದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರುವುದಿಲ್ಲ.
ಬಳ್ಳಾರಪ್ಪ ಕಾಲೋನಿಯ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರ್ಮಿಕರುಕಾಲುವೆ ಪಕ್ಕದಲ್ಲಿರುವಇನ್ನಿತರ ಕಾಲೋನಿಗಳಾದ ರಾಜೇಶ್ವರಿ ಕಾಲೋನಿ, ಕಾಕರ್ಲತೋಟ, ಮುಂಡ್ರಿಗಿ ಕಾಲೋನಿಗೆ ಹೋಗಿ-ಬರಬೇಕಾದರೆ ಕನಿಷ್ಟ 3 ಕಿ.ಮೀ.ರಷ್ಟು ಸುತ್ತಿಕೊಂಡು ಹೋಗಿಬರಬೇಕಾಗುತ್ತದೆ ಇದರಿಂದ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ,
ಆದ್ದರಿಂದದಯಮಾಡಿ ತಾವುಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿಆದಷ್ಟು ಬೇಗ ಹಳ್ಳದ ಮೇಲೆ 10 ಅಡಿ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಯುವಸೇನದ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರಾದ ಎಸ್.ಕೃಷ್ಣ, ಜಿ.ಎಂ. ಭಾಷ,ಉಪ್ಪಾರ ಮಲ್ಲಪ್ಪ, ಸಲಾವುದ್ದೀನ್.ಎಸ್.ಆರ್. ಎಂ.ಕೆ.ಜಗನ್ನಾಥ,ಪಿ.ನಾರಾಯಣ,
ಶಿವಾನಂದ, ತೇಜುಪಾಟೀಲ್, ಕೆ.ವೆಂಕಟೇಶ, ಎಂ. ಅಭಿಷೇಕ್, ಮತ್ತಿತರರು ಇದ್ದರು.