ಬಳಸಿ ಬ್ರಹ್ಮಚಾರಿಯಾದ ಗುರುನಿರುಪಾದೀಶ:ಮಸೂತಿಶ್ರೀ

ತಾಳಿಕೋಟೆ:ಮಾ.24: ಗುರು ನಿರುಪಾದೀಶನ ಪತ್ನಿ ಚೆನ್ನಮಲ್ಲಮ್ಮ ವರ್ಷದಲ್ಲಿಯೇ ಗರ್ಭಧರಿಸುತ್ತಾಳೆ ಈ ಕಾರಣದಿಂದ ತವರು ಮನೆಯಾದ ಬಳಗಾನೂರ ಗ್ರಾಮಕ್ಕೆ ಹೆರಿಗೆಗಾಗಿ ಅತ್ತಿ ರಾಚಮ್ಮ ಮಾವ ಗುರುಲಿಂಗಯ್ಯ ಕಳುಹಿಸಿಕೊಡುತ್ತಾರೆ ಇತ್ತ ನಿರುಪಾದೀಶರನಿಗೆ ಭಗವಂತನು ನೀಡಿದ ಬೆತ್ತದಿಂದ ಅನೇಕ ತೊಂದರೆಗೊಳಗಾದ ಭಕ್ತಸಮೂಹಕ್ಕೆ ಉದ್ದರಿಸುತ್ತಾ ಸಾಗುತ್ತಾರೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಶನಿವಾರರಂದು 13ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಹೆರಿಗಾಗಿ ಹೋದ ಚೆನ್ನಮಲ್ಲಮ್ಮ ದಿನತುಂಬಿ ಗಂಡು ಮಗುವಿಗೆ ಜನ್ಮನೀಡುತ್ತಾಳೆ ಮನೆಗೆ ನಂದಾದೀಪದಂತೆ ಮನೆ ಬೆಳಗಲು ಗಂಡು ಮಗು ಜನಿಸಿತೆಂಬ ವಿಷಯ ಕೇಳಿ ತಂದೆ ತಾಯಿಯವರು ಹರ್ಷ ವ್ಯಕ್ತಪಡಿಸುತ್ತಾರೆ ವಯೋವೃದ್ದತೆ ಹೊಂದಿದ ತಂದೆ ಗುರುಲಿಂಗಯ್ಯ ತಾಯಿ ರಾಚಮ್ಮಳು ತೀರಿ ಹೋಗುತ್ತಾರೆ.
ತಂದೆ ತಾಯಿ ತರಿದರೂ ಸೋದರ ಮಾವನಿರಬೇಕೆಂಬ ಗಾಧೆ ಮಾತಿನಂತೆ ಗುರು ನಿರುಪಾದೀಶ್ವರ ಮಾವನ ಮನೆಗೆ ಹೋಗುತ್ತಾರೆ ಜನ್ಮ ತಾಳಿದ ಮಗನಿಗೆ ಸೋಮೇಶ್ವರನೆಂದು ಹೆಸರಿಡುತ್ತಾರೆ ಯಾವುದಾದರೂ ದಿನನಿತ್ಯ ಕಾಯಕ ಮಾಡಬೇಕೆಂಬ ಉದ್ದೇಶ ಹೊತ್ತ ನಿರುಪಾದೀಶ್ವರ ಮಾವನಿಗೆ ಕೇಳುತ್ತಾನೆ ಎಲ್ಲಿಯಾದರೂ ಯಾವ ಕೆಲಸವಾದರೂ ಹಚ್ಚು ನಾನು ಮಾಡುತ್ತೇನೆಂದಾಗ ನಾನು ಸಾಕಷ್ಟು ಗಳಿಸಿದ್ದೇನೆ ಕುಂತು ತಿನ್ನುವಂತಹ ಕಾರ್ಯ ಸತಿ ಪತಿ ಮಾಡಿರಿ ಎಂದು ಮಾವ ಹೇಳುತ್ತಾನೆ ಇದಕ್ಕೆ ಉತ್ತರಿಸಿದ ನಿರುಪಾದೀಶ್ವರ ಗಳಿಸಿದ ಹಣದ ಊಟ ತಂಗಳ ಊಟವಾಗುತ್ತದೆ ಮಾವನಿಂದ ತಿಂದ ಊಟ ಹಳಿಸಿದ ಊಟವಾಗುತ್ತದೆ ಸ್ವಂತ ದುಡಿತದಿಂದ ತಿಂದ ಊಟ ಬಿಸಿ ಊಟವಾಗಿ ಪರಿಣಮಿಸುತ್ತದೆ ಎಂದು ಮಾವನಿಗೆ ಉತ್ತರಿಸಿದ ನಿರುಪಾದೀಶ್ವರ ತಾನಾಗಿಯೇ ಅದೇ ಊರಲ್ಲಿ ಅಲ್ಲಲ್ಲಿ ಕೇಳಿ ಹೊಲದಲ್ಲಿ ನಟ್ಟು ಕಡಿಯಲು ತೋಟದಲ್ಲಿ ನೀರು ಹಾಯಿಸಲು ಈ ದುಡಿತದ ಕಾರ್ಯಕ್ಕೆ ಹೋಗುತ್ತಾರೆ ಇದನ್ನೇಲ್ಲಾ ನೋಡಿ ಮಾವನಾದ ಶಿವಯ್ಯನಲ್ಲಿ ಹೊಟ್ಟೆ ಕಿಚ್ಚು ತುಂಬುತ್ತದೆ ನಿರುಪಾದೀಶ್ವರ ತನ್ನಲ್ಲಿದ್ದ ಬೆತ್ತದಿಂದ ಭಕ್ತರ ಬೇಕು ಬೇಡಿಕೆಗಳನ್ನು ಸಹ ಇಡೇರಿಸುತ್ತಾ ಸಾಗಿದುದ್ದನ್ನು ಲಕ್ಷೀಸಿದ ಮಾವ ಶಿವಯ್ಯ ಆತನ ಬೆತ್ತವನ್ನೇ ಸುಟ್ಟು ಹಾಕಬೇಕೆಂಬ ವಿಚಾರ ಹೊಂದುತ್ತಾನೆ ಕಾಮದೇನು ಕಲ್ಪವೃಕ್ಷದಂತಿರುವ ಬೆತ್ತದಿಂದ ಬೇಕಾದುದ್ದನ್ನು ಮಾಡಬಹುದೆಂಬುದನ್ನು ಅರೀತ ನಿರುಪಾದೀಶ್ವರ ಬೆತ್ತವನ್ನು ಕೆಳಗೆ ಇಡಬಾರದೆಂಬ ದೇವಾಜ್ಞೆಯಂತೆ ನಡೆದುಕೊಂಡು ಬಂದಿದ್ದ ಆ ಬೆತ್ತವನ್ನು ಜಂತಿಯಲ್ಲಿ ಇಟ್ಟು ಹೊಲಕ್ಕೆ ತೆರಳಿದ್ದ ಇತ್ತ ಮಾವ ಬೆತ್ತವನ್ನು ತೆಗೆದುಕೊಂಡು ನೀರು ಕಾಯಿಸುವ ನೀರ ಒಲೆಯಲ್ಲಿ ಆ ಬೆತ್ತವನ್ನು ಹಾಕಿ ಬೆಂಕಿ ಹಚ್ಚುತ್ತಾನೆ ಆ ಬೆಂಕಿ ಧಗಃ ಧಗಃನೆ ಇಡೀ ಮನೆಗೆ ಪ್ರಜ್ವಲಿಸುತ್ತಾ ಮನೆಯೇ ಕರಕಲಾದರೂ ಬೆತ್ತಕ್ಕೆ ಏನು ಆಗದೇ ಅದು ಹೇಗೆ ಇತ್ತು ಹಾಗೆ ಇತ್ತೆಂದು ಶ್ರೀಗಳು ನುಡಿದರು.
ಇದನ್ನೇಲ್ಲಾ ಅರೀತ ಗುರು ನಿರುಪಾದೀಶ್ವರ ಸಂಸಾರವೇ ಸಾಕೆಂಬ ಮಾತನ್ನು ಹೆಂಡತಿಗೆ ಹೇಳಿ ಎಲ್ಲವನ್ನು ನೋಡಿಕೊಂಡು ಹೋಗು ಎಂದು ಹೇಳಿ ಹೋಗಲು ಮುಂದಾಗುತ್ತಾನೆ ಎಲ್ಲವನ್ನು ತ್ಯಾಗಮಾಡಿದ್ದಾನೆ ವೈರಾಗ್ಯವನ್ನು ತಾಳಿ ದೇಶ ಸಂಚಾರಕ್ಕೆ ನಿರುಪಾದೀಶ್ವರ ಹೊರಟಾಗ ಪತ್ನಿ ಚೆನ್ನಮಲ್ಲಮ್ಮ ಪರಿ ಪರಿಯಾಗಿ ನಿರುಪಾದೀಶ್ವರನಿಗೆ ಬೇಡಿಕೊಳ್ಳುತ್ತಾಳೆ ಹೋಗಬೇಡಿ ಹೋಗಬೇಡಿ ಎಂದು ಎಷ್ಟೇ ವಿನಂತಿಸಿದರೂ ಅದಕ್ಕೆ ಉತ್ತರಿಸಿದ ನಿರುಪಾದೀಶ್ವರ ನೀನು ಗಾಭರಿಯಾಗುವದು ಬೇಡಾ ಮಗನನ್ನು ಸರಿಯಾಗಿ ನೋಡಿಕೋ ಮುಂದೆ ನೀನು ಬಂದರೆ ತೆಲಿಕಟ್ನಾಳಕ್ಕೆ ಬರಬೇಕು ಅಲ್ಲಿ ಮಗನನ್ನು ತಂದು ಒಪ್ಪಿಸಬೇಕೆಂದು ಹೆಂಡತಿಗೆ ನಿರುಪಾದೀಶ್ವರ ಹೇಳುತ್ತಾನೆ ಒಂದು ಕೈಯಲ್ಲಿ ಬೆತ್ತ ಇನ್ನೊಂದು ಕೈಯಲ್ಲಿ ವಿಭೂತಿ ಉಂಡಿಯನ್ನು ತೆಗೆದುಕೊಂಡು ತೆರಳುತ್ತಾನೆ ಹೆಂಡತಿಗೆ ಹೇಳುತ್ತಾನೆ ನೀನೇ ನನ್ನ ಗುರುವಾದಿ ಅಳಬೇಡಾ ಅಂಜಬೇಡಾ ಹೆಂಡತಿಗೆ ದೈರ್ಯದ ಮಾತುಗಳನ್ನು ಹೇಳಿ ಅಂಬಾ ಮಠಕ್ಕೆ ತೆರಳುತ್ತಾನೆ.
ಅಂಬಾ ಮಠದಲ್ಲಿ ದೇವಿಯ ಮಹಾತ್ಮೆಯನ್ನು ಕಂಡು ಭಕ್ತಿಯಿಂದ ನಡೆದ ನೀರುಪಾದೀಶ ಆಕೆಯನ್ನು ಪ್ರತ್ಯಕ್ಷ ಮಾಡಿಕೊಳ್ಳುತ್ತಾನೆ ಮುಂದೆ ನೀರುಪಾದೀಶ್ವರನಿಗೆ ಒಬ್ಬ ಆಚಾರವಂತ ಬೆಟ್ಟಿಯಾಗುತ್ತಾನೆ ಆತ ಎಲ್ಲವನ್ನು ಭಲವನಿರುತ್ತಾನೆ ಆತನನ್ನು ನೋಡಿದ ನೀರುಪಾದೀಶ್ವರನಿಗೆ ಅನಿಸುತ್ತದೆ ಇತನಿಗೆ ಅಹಂಕಾರ ಬಂದಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ ಶ್ರೀಗಳು ಶ್ರೀ ಅಂಬಾ ಮಠದ ಶ್ರೀ ದೇವಿಯ ಮಹಾತ್ಮೆ ಎಂಬ ಚಿಕ್ಕ ಕಥೆಯೊಂದನ್ನು ಹೇಳಿ ಪತಿ ಕಳೆದುಕೊಂಡ ಪತ್ನಿ ತನ್ನ ಚಿಕ್ಕ ಮಗನನ್ನು ದೂರಿಕರಿಸಿ ವೆಬಿಚಾರಕ್ಕೆ ಬಿದ್ದ ಆ ಮಹಿಳೆ ತನ್ನ ಮಗನಿಗೆ ವಿಷ ಹಾಕಿ ನೀರು ಕುಡಿಸಿ ಮೃತಪಟ್ಟ ಆ ವಿಷಯಕ್ಕೆ ಸಂಬಂದಿಸಿ ಅಂಬಾ ಮಠದ ಶ್ರೀ ದೇವಿಯು ಪ್ರತ್ಯಕ್ಷವಾಗಿ ಆ ಮಹಿಳೆಯನ್ನು ಸುಟ್ಟು ಹಾಕಿ ಆ ಸತ್ತ ಮಗುವನ್ನು ಪುನರ್ ಜೀವ ನೀಡಿ ಬಧುಕಿಸುತ್ತಾಳೆಂದು ಚಿಕ್ಕ ಕಥೆಯೊಂದನ್ನು ಭಕ್ತಸಮೂಹಕ್ಕೆ ಹೇಳಿ ಸತ್ಯ ಶುದ್ದ ಕಾಯಕದಲ್ಲಿ ಇರಬೇಕೆಂಬುದನ್ನು ಅರ್ಥೈಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.