ಬಳಸಿ ಬಿಸಾಡಿರುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ನೀಡಲು ಮನವಿ

ಚಿತ್ರದುರ್ಗ.ಜು.೧೯; ನಗರದ ಮೇದೆಹಳ್ಳಿ ರಸ್ತೆಯ ಅಂಡರ್ ಪಾಸ್ ಬಳಿ ಇರುವ ರಾಷ್ಟಿçÃಯ ಹೆದ್ದಾರಿ ಪಕ್ಕ, ಇರುವ ಸರ್ವಿಸ್ ರೋಡಿನಲ್ಲಿ, ದಿನನಿತ್ಯ ಪ್ಲಾಸ್ಟಿಕ್ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದರ ಬಗ್ಗೆ ನಗರಸಭೆಯಾಗಲಿ, ರಾಷ್ಟಿçÃಯ ಹೆದ್ದಾರಿಯವರಾಗಲಿ, ಪಂಚಾಯಿತಿಯಾಗಲಿ ಯಾವುದೇ ಕ್ರಮ ಜರುಗಿಸದೆ, ರಸ್ತೆ ಅಕ್ಕ ಪಕ್ಕ ನೋಡಲು ಅಸಹ್ಯಕರವಾದ ದೃಶ್ಯವನ್ನು ನಿರ್ಮಿಸಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ಆರೋಪಿಸಿದ್ದಾರೆ.ಇಲ್ಲಿ ಎಸೆದಿರುವ ಪ್ಲಾಸ್ಟಿಕ್, ಒಂದೇ ಪಾರ್ಸಲ್ ಕಂಪೆನಿಯ ಅಂಗಡಿಯಿAದ ಬಂದಿದೆ, ಇಂತಹ ನಿರ್ದಿಷ್ಟ್ವಾಗಿ ಬಂದು ಬೀಳುವ ಕಸದ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನ ಕರೆಸಿ, ಅವರ ಮನ ಪರಿವರ್ತಿಸುವ ಕೆಲಸವಾಗಬೇಕಾಗಿದೆ, ಇಲ್ಲಾ ದಂಡ ವಸೂಲಿ ಮಾಡಬೇಕು. ಆದರೆ ನಾವು ಪ್ಲಾಸ್ಟಿಕ್ ಅನ್ನು ಸಾರಾಸಗಟಾಗಿ ರಸ್ತೆ ಪಕ್ಕದಲ್ಲಿ ಬಿಸಾಡಿ ಹೋಗಬಹುದು ಎಂಬ ವಾತಾವರಣ ನಿರ್ಮಾಣ ಮಾಡಿದ್ದೇವೆ, ಇದರಿಂದ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ನ ತ್ಯಾಜ್ಯ ಹೆಚ್ಚಾಗಿ, ನೋಡಲು ಅಸಹ್ಯಕರವಾದ ರಾಶಿಯಾಗಿದೆ. ಜನತೆಗೆ ಇದು ಯಾಕೆ ನಗರಸಭೆಯವರಿಗೆ ಆಗಲಿ, ಪಂಚಾಯಿತಿಯವರಿಗೆ ಆಗಲಿ, ರಾಷ್ಟಿçÃಯ ಹೆದ್ದಾರಿ ನಿಗಮದವರ ಅರಿವಿಗೆ ಬರುತ್ತಿಲ್ಲ ಎಂದು ಆಶ್ಚರ್ಯವಾಗುತ್ತಿದೆ. ಈ ರಸ್ತೆಗಳು ನಗರಸಭೆಗೆ ಸೇರಿದ್ದೋ, ಪಂಚಾಯಿತಿಗೆ ಸೇರಿದ್ದೋ, ರಾಷ್ಟಿçÃಯ ಹೆದ್ದಾರಿಗೆ ಸೇರಿದ್ದೋ ಎಂದು ಜನರಿಗೂ ಸಹ ಸಂದೇಹ ಮೂಡಿದೆ. ಹಾಗಾಗಿ ಜನರೂ ಸಹ ಇದಕ್ಕೆ ಹೊಂದಿಕೊAಡು, ಕಸ ಇದ್ದರೆ ಇರಲಿ ಬಿಡು ಎಂದು ಕಸ ನೋಡಿಕೊಂಡು ಓಡಾಡುತ್ತಿದ್ದಾರೆ. ನಗರದ ಸ್ವಚ್ಚತಾ ಆಂದೋಲನದ ಬಗ್ಗೆ ಎಲ್ಲ ಕಡೆ ಕಾರ್ಯಕ್ರಮ ಆಯೋಜಿಸಿದ್ದವರು, ಇಲ್ಲಿ ರಸ್ತೆಬದಿಯಲ್ಲಿ ಬೀಳುತ್ತಿರುವ ಕಸದ ತಾತ್ರ‍್ಯವೇಕೆ ಎಂದು ಪ್ರಶ್ನಿಸಿದ್ದಾರೆ.ಹಾಗಾಗಿ ನಗರಸಭೆಯವರು, ಪಂಚಾಯಿತಿಯವರಿರಬಹುದು, ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ ಪಕ್ಕದ ರಸ್ತೆಯ ಪಕ್ಕದಲ್ಲಿ, ಕಸ ಎಸೆದವರನ್ನ ಗುರುತಿಸಿ, ಅವರಿಂದ ದಂಡ ವಸೂಲಿ ಮಾಡಿ, ಜಾಗೃತಿ ಮೂಡಿಸಿ, ಸ್ವಚ್ಛ ಭಾರತದ ಕಡೆ ಹೆಜ್ಜೆ ಹಾಕಬೇಕು ಎಂದು ವಿನಂತಿಸಿಕೊAಡಿದ್ದಾರೆ.ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಬೇಕೆಂದು ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ ಎಂದು ಎಲ್ಲ ರಾಜ್ಯಗಳೂ ಅದರ ಬಗ್ಗೆ ಅವಿರತವಾಗಿ ಹೆಜ್ಜೆಯಿಡುತ್ತಿವೆ, ಪ್ಲಾಸ್ಟಿಕ್ ಲೋಟ, ತಟ್ಟೆ, ಚಮZ,À ಕಲ್ಯಾಣ ಮಂದಿರದಲ್ಲಿ ಬಿಸಾಡುವಂತಹ ತ್ಯಾಜ್ಯವನ್ನು ನಿರ್ವಹಣೆ ಮಾಡಲು ಬಹಳಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸರ ಮಾಲಿನ್ಯ ಇಲಾಖೆ ಎಲ್ಲ ಕಡೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ, ವಾಹನಗಳಿಂದ ಬರುವ ಹೊಗೆಯನ್ನು ನಿಯಂತ್ರಿಸುತ್ತಿದೆ, ಆದರೆ ರಸ್ತೆ ಬದಿಯ ಕಸವನ್ನು ಯಾರು ನಿಯಂತ್ರಿಸಬೇಕು ಎಂಬುದೇ ಅರಿವಿಗೆ ಬರುತ್ತಿಲ್ಲ ಎಂದಿದ್ದಾರೆ.ಶಾಲೆ ಪಕ್ಕಾ, ಕಾಲೇಜ್ ಪಕ್ಕ, ಜನರನ್ನ ನಿಧಾನವಾಗಿ ಜಾಗೃತಗೊಳಿಸಿ, ಮನೆ ಮನೆಗೆ ಕಸ ಸಂಗ್ರಹ ಮಾಡುವುದನ್ನು, ವಿಂಗಡಿಸುವುದನ್ನು ಕಲಿಸುತ್ತಿದ್ದಾರೆ. ರಸ್ತೆಬದಿಯಲ್ಲಿ, ಹೈವೇ ಪಕ್ಕ, ಸರ್ವಿಸ್ ರೋಡ್‌ಗಳಲ್ಲಿ ಎಸೆದ ಕಸದ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಇದು ತುಂಬಾ ಆಶ್ಚರ್ಯಕರವಾಗಿದೆ ಎಂದಿದ್ದಾರೆ.ಇಲ್ಲಿ ರಸ್ತೆ ಅಕ್ಕ ಪಕ್ಕ ಇರುವ, ಸುತ್ತಮುತ್ತಲಿರುವ ಅಂಗಡಿಯವರು, ಹೋಟೆಲಿನವರು, ವ್ಯಾಪಾರ ಮಾಡುವಂಥವರೇ ಇಲ್ಲಿ ಕಸವನ್ನು ಸುರಿದಿದ್ದಾರೆ, ಆ ಕಸ ನಿರ್ದಿಷ್ಟವಾದ ಒಂದು ಕಂಪೆನಿಗೆ ಸೇರಿದ ಅಂಗಡಿಗೆ ಸೇರಿದ್ದೇ ಆಗಿರುತ್ತದೆ. ಅಂಥವರಿಗೆÀ ಜಾಗೃತಿ ಮೂಡಿಸಿ, ದಂಡ ವಸೂಲಿ ಮಾಡಿ, ಅವರಿಂದಲೇ ಕಸವನ್ನು ತೆಗೆಸುವಂತೆ ವ್ಯವಸ್ಥೆ ಮಾಡಿದರೆ, ಮಾತ್ರ ನಾವು ಸ್ವಚ್ಚತೆ ಕಡೆ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಇಲ್ಲಿ ಕಸ ಎಸೆದಿರುವುದು ಒಂದು ಪಾರ್ಸೆಲ್ ಕಂಪೆನಿ ಅಂಗಡಿ, ತನ್ನ ಲೇಬಲ್ ಸಮೇತ ಪ್ಲಾಸ್ಟಿಕ್ ಎಸೆದಿದೆ. ಹಾಗಾಗಿ ನಗರ ಸಭೆಯವರು ಅಲ್ಲಿ ಸುತ್ತಮುತ್ತಲಿರುವ ಪಾರ್ಸಲ್ ಕಂಪನಿಯವರನ್ನು ಕರೆಯಿಸಿ, ಈ ಕಸವನ್ನು ಏಕೆ ಎಸೆದಿರಿ, ಅದನ್ನ ನೀವು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿ, ನಿಮ್ಮ ಅಂಗಡಿಯಲ್ಲಿ ಕಸ ವಿಂಗಡ ಮಾಡಿ ಎಂಬುದನ್ನು ತಿಳಿಸಿಕೊಟ್ಟು, ಜಾಗೃತಿ ಮೂಡಿಸಬೇಕಾಗಿದೆ. ಹಾಗೆ ಮತ್ತೆ ಮತ್ತೆ ಕಸ ಎಸೆದರೆ ದಂಡ ವಸೂಲಿ ಮಾಡುತ್ತೆವೆ ಎಂಬುದನ್ನು ಅವರಿಗೆ ತಿಳಿಸಿಕೊಡಬೇಕಾಗುತ್ತದೆ. ಇಲ್ಲಿ ಮನಪರಿವರ್ತನೆ ಕೆಲಸವಾದರೂ ಆಗಬೇಕು, ಕಾನೂನು, ದಂಡ ವಸೂಲಿಯಾದರು ಆಗಬೇಕು. ಈ ಮೂರು ಆಗದಿದ್ದಾಗ, ಜನರು ಮನಸೋ ಇಚ್ಛೆ ಬಂದು, ಕಸವನ್ನು ರಸೆ ಬಳಿ ಸುರಿಯುತ್ತಿದ್ದಾರೆ. ಈ ಕಸವನ್ನು ಪ್ರಾಣಿ ಪಕ್ಷಿಗಳು ತಿಂದು ತಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು, ತಮ್ಮ ಜೀವವನ್ನು ಕಳೆದುಕೊಳ್ಳುತ್ತಿವೆ ಎಂದಿದ್ದಾರೆ.ಅದೇ ರೀತಿ ತುಂಬ ಕಡೆ ಹತ್ತಿ ಜಿನ್ ಫ್ಯಾಕ್ಟರಿಯವರು ಅಥವಾ ಟೈರ್ ಬದಲಿಸುವ ಗ್ಯಾರೇಜ್‌ನವರು ತುಂಬ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ, ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ನಮ್ಮ ಜಾಗೃತಿ ಕೆಲಸಗಳು ಊರಿನ ಒಳಗೆ ನೆಡಯುತ್ತಿದೆ, ಊರ ಹೊರಗೆ ಕಸ ಎಸೆಯುವವರ ಬಗ್ಗೆ ಜಾಗೃತಿ ಮೂಡುತ್ತಿಲ್ಲ, ಹಾಗಾಗಿ ಊರಿನವರೆಗೂ ಜಾಗೃತಿ ಕಾರ್ಯಕ್ರಮವನ್ನು ವಾರಕ್ಕೊಮ್ಮೆಯಾದರೂ, ತಿಂಗಳಿಗೊಮ್ಮೆಯಾದರೂ ಮಾಡಬೇಕು. ಇಲ್ಲ ಸಣ್ಣ ಸಣ್ಣ ಯಂತ್ರಗಳ ಮುಖಾಂತರ ಸ್ವಚ್ಚಗೊಳಿಸುವುದನ್ನಾದರು ಕಲಿಯಬೇಕಾಗಿದೆ. ಈಗೊಂತು ಜೆಸಿಬಿಗಳು ಎಲ್ಲಾ ಕಡೆ ದೊರೆಯುತ್ತಿದೆ. ಇಂತಹ ರಾಶಿ ಬಿದ್ದ ಕಸದ ಗುಡ್ಡೆಗಳನ್ನ ಸ್ವಚ್ಛ ಮಾಡಿಸಿ, ಅಲ್ಲಿ ಸ್ವಚ್ಛತೆ ಕಾರ್ಯಕ್ರಮದ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದಿದ್ದಾರೆ.ಈಗ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರನ್ನ ಉಪಯೋಗಿಸಿಕೊಂಡು ಮನೆಮನೆಗೂ ಹೋಗಿ, ಮಲೇರಿಯಾ, ಡೆಂಗೂ, ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಅದೇ ರೀತಿ ಈ ಕಸದ ಬಗ್ಗೆ ಸಹ ಜಾಗೃತಿ ಮೂಡಿಸಬೇಕಾಗಿದೆ. ಮನೆಮನೆಯಿಂದ ಬಂದು ಬಿದ್ದ ಕಸದ ರಾಶಿ ಈಗ ಸಮಸ್ಯೆಯಾಗಿ ಬಂದು ಕುಳಿತಿರುವುದು. ಹಾಗಾಗಿ ತುಂಬ ಸಂಘ ಸಂಸ್ಥೆಗಳ ಸಹಾಯ ಪಡೆದು, ಈ ಕಸ ನಿರ್ವಹಣೆ ಬಗ್ಗೆ ಜಾಗೃತಿ ಮುಡಿಸಬೇಕಾಗಿದೆ ಎಂದಿದ್ದಾರೆ.ಪ್ರತಿಯೊAದು ಎಸೆÀದ ಕಸವನ್ನು ಅಧ್ಯಯನ ಮಾಡಿದರೆ, ಕೊಲೆಗಾರನನ್ನ ಹಿಡಿದಂತೆ, ಕಸ ಎಸೆದವರನ್ನ ಹಿಡಿಯುವುದು ಕಷ್ಟವಲ್ಲ. ನಗರಸಭೆಯವರು ಒಂದು ತಜ್ಞರ ಕಮಿಟಿಯನ್ನು ಮಾಡಿ, ಅದು ಯಾರು ಎಲ್ಲೆಲ್ಲಿ ಕಸ ಎಸೆಯುತ್ತಿದ್ದಾರೆ, ಎಂದು ಕಂಡುಹಿಡಿದು, ದಂಡು ಹಾಕುತ್ತಾ ಬಂದರೆ, ಖಂಡಿತ ಜನರಲ್ಲಿ ಬದಲಾವಣೆ ಕಾಣಬಹುದು ಎಂದಿದ್ದಾರೆ.ತಕ್ಷಣ ಆ ಕಸದ ಗುಡ್ಡೆ ನಿರ್ಮಿಸಿದ, ಪಾರ್ಸೆಲ್ ಕಂಪನಿಯವರು ಅಂಗಡಿಯವರನ್ನ ಕರೆಸಿ ಅವರಿಗೆ ಸ್ವಚ್ಛತೆ ಬಗ್ಗೆ ಜಾಗೃತಗೊಳಿಸಿ ಎಂದು ವಿನಂತಿಸಿಕೊAಡಿದ್ದಾರೆ.

Attachments area