ಬಳಗಾನೂರ ಪ.ಪಂ ಬಿಜೆಪಿ ತೆಕ್ಕೆಗೆ

ಸಿಂಧನೂರು.ನ.5- ನಿರೀಕ್ಷೆ ಮಾಡಿದಂತೆ ಬಳಗಾನೂರ ಪಟ್ಟಣ ಪಂಚಾಯತಿ ಬಿಜೆಪಿಯ ನೂರ್‌ಜಾ ಬೇಗಂ ಅಧ್ಯಕ್ಷರಾಗಿ, ಮಂಜುನಾಥ ಕರಡಕಲ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ,ಉಪಾಧ್ಯಕ್ಷ ಸ್ಥಾನ ಬಿಸಿಎಮ್‌ಎ ಮೀಸಲಾಗಿದ್ದು ವಾರ್ಡ್ ನಂ – 1 ರ ಬಿಜೆಪಿಯ ಸದಸ್ಯರಾದ ನೂರ್‌ಜಾ ಬೇಗಂ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ -5 ಸದಸ್ಯರಾದ ಮಂಜುನಾಥ ಕರಡಕಲ್ ನಾಮಪತ್ರ ಸಲ್ಲಿಸಿದ್ದು ಇತರ ಸದಸ್ಯರು ಯಾರು ನಾಮಪತ್ರ ಸಲ್ಲಿಸಲಾರದ ಕಾರಣ ನೂರ್‌ಜಾ ಬೇಗಂ ಹಾಗೂ ಮಂಜುನಾಥ ಕರಡಕಲ್ ಇವರ ನಾಮಪತ್ರಗಳು ಕ್ರಮಬದ್ದ ವಾಗಿದ್ದು ನೂತನ ಅಧ್ಯಕ್ಷರಾಗಿ ನೂರ್‌ಜಾ ಬೇಗಂ, ಉಪಾಧ್ಯಕ್ಷರಾಗಿ ಮಂಜುನಾಥ ಕರಡಕಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಲರಾಮ ಕಟ್ಟಿಮನಿ ಅಧಿಕೃತವಾಗಿ ಪ್ರಕಟಿಸಿದರು.
ಪ.ಪಂಯಲ್ಲಿ ಒಟ್ಟು 12 ಸದಸ್ಯರಲ್ಲಿ ಬಿಜೆಪಿ -6, ಕಾಂಗ್ರೆಸ್ -5 , ಹಾಗೂ ಪಕ್ಷೇತರ ಒಬ್ಬ ಸದಸ್ಯ ಇದ್ದು ಕಾಂಗ್ರೆಸ್ ಪಕ್ಷದ 8 ನೇ ವಾರ್ಡಿನ ಸದಸ್ಯರಾದ ಯಂಕಪ್ಪ ನಾಯಕ ಹಾಗೂ ಪಕ್ಷೇತರ ಸದಸ್ಯರಾದ ಸತ್ಯವತಿ ಇವರಿಗೆ ಒಂದು ತೊಲೆ ಬಂಗಾರ ಕೊಟ್ಟು ಆಪರೇಷನ್ ಕಮಲ ಮಾಡುವ ಮೂಲಕ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ.
ಪಟ್ಟಣ ಪಂಚಾಯತಿಯ ಅಧಿಕಾರ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದು ,ಕಾಂಗ್ರೆಸ್ ಪಕ್ಷ ಹೆಚ್ಚು ಆಸಕ್ತಿ ತೋರಿಸಲಾರದ ಕಾರಣ ಕಾಂಗ್ರೆಸ್ ಪಕ್ಷದ ಒಬ್ಬ ಸದಸ್ಯ ಹಾಗೂ ಪಕ್ಷೇತರ ಒಬ್ಬ ಸದಸ್ಯ ಸೇರಿದಂತೆ 7 ಜನ ಸದಸ್ಯರಿಗೆ ತಲಾ ಒಂದು ತೊಲೆ ಬಂಗಾರ ಕೊಟ್ಟು ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷದ ಸದಸ್ಯರನ್ನು ಸಳೆಯುವ ಭಯದಿಂದ ಬಿಜೆಪಿ ಮುಖಂಡರು 7 ಜನ ಸದಸ್ಯರನ್ನು ಆಂದ್ರಪ್ರದೇಶದ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಇಂದು ಸಮಯಕ್ಕೆ ಸರಿಯಾಗಿ ಬಂದು ಮತ ಹಾಕಿದ ಕಾರಣ ಪಟ್ಟಣ ಪಂಚಾಯತಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ.
ವಾಮ ಮಾರ್ಗದಿಂದ ನಿಜ ಪಕ್ಷ ಅಧಿಕಾರಕ್ಕೆ ಬಂದಿದ್ದು ಮತ ನೀಡಿದ ಮತದಾರರಿಗೆ ದ್ರೋಹ ವಾಗಿದೆ.ಮುಂದಿನ ದಿನಗಳಲ್ಲಿ ‌ಮತದಾರರು ಇವರಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದರು.
ನೂತನ ಅಧ್ಯಕ್ಷ ನೂರ್ ಜಾ ಬೇಗಂ, ಉಪಾಧ್ಯಕ್ಷರಾಗಿ ಮಂಜುನಾಥ ಕರಡಕಲ್ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಪಕ್ಷದ ಮುಖಂಡರು ,ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.