ಬಳಗಾನೂರ ಕೆರೆಗೆ ಶಾಸಕ ಮನಗೂಳಿ ಭೇಟಿ ಕಾಮಗಾರಿ ಪರಿಶೀಲನೆ

ಸಿಂದಗಿ:ಜ.1: ಪಟ್ಟಣದ ಶಾಶ್ವತ ಕುಡಿಯುವ ನೀರಿನ ಭವಣೆ ನೀಗಿಸಲು ಕಳೇದು 1994 ರಲ್ಲಿ ಅಂದಿನ ಜನಸಂಖೆಂಖ್ಯೆಗನುಗುಣವಾಗಿ ಕೆರೆ ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲಾಗಿತ್ತು ಪ್ರಸಕ್ತ ಜನಸಂಖ್ಯೆಯ ಆಧಾರದ ಮೇಲೆ ಕಳೇದ ಒಂದು ವರ್ಷದ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಬರುವ ಎಪ್ರೀಲ್ ತಿಂಗಳಲ್ಲಿ ಪಟ್ಟಣದ ಕೆರೆಗೆ ತಾಲೂಕಿನ ಬಳಗಾನೂರ ಕೆರೆಯಿಂದ ನೀರು ಹರಿದು ಬರುವಂತಾಗಬೇಕು ಕಾಮಗಾರಿ ಕಾರ್ಯ ತ್ವರಿತಗತಿಯಲ್ಲಿ ಮುಗಿಸಬೇಕೆಂದು ಶಾಸಕ ಎಮ್.ಸಿ.ಮನಗೂಳಿ ವಾಟರ್ ಬೋರ್ಡ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕಿನ ಬಳಗಾನೂರ ಕೆರೆಗೆ ಭೇಟಿ ನೀಡಿ ಅವರು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಪಟ್ಟಣದ ಜನತೆಗೆ ನೀಡಿದ ಮಾತನನ್ನು ಈಡೇರಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ರೂ 27.10 ಕೋಟಿ ಅನುದಾನದಲ್ಲಿ ತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಲು ಯೋಜನೆಯನ್ನು ಹಾಕಲಾಗಿತ್ತು ಈಗ ಆ ಕಾಮಗಾರಿ ಕಾರ್ಯ ಬರದಿಂದ ಸಾಗುತ್ತಿದೆ. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ಈಗಾಗಲೇ ಪೈಪ್‍ಗಳ ಜೋಡಣಾ ಕಾರ್ಯ ಮುಕ್ತಾಯಗೊಂಡಿದೆ ಇನ್ನು ಜಾಕವೆಲ್ ಕಾರ್ಯ ಮುಗಿದ ನಂತರ ನೀರು ಹರಿದು ಬರಲಿದೆ ಮತ್ತು ಸಿಂದಗಿ ಕೆರೆಗೆ ನೀರು ಹರಿದು ಬಂದ ನಂತರ ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ ಯಾವ ತೊಂದರೆಯಾಗುವದಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿ ಮನೆಗೆ 24 ಗಂಟೆಗಳ ನೀರಿನ ವ್ಯವಸ್ಥೆ ಮಾಡಲು ಯೋಜನೆ ಹಮ್ಮಿಕೊಂಡಿದ್ದೇವೆ. ಆದಷ್ಟು ಬೇಗನೇ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ವಾಟರ್ ಬೋರ್ಡ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಕಾಮಗಾರಿ ಕಾರ್ಯ ಅತ್ಯಂತ ವೇಗದಗತಿಯಲ್ಲಿ ನಡೆಯುತ್ತಿದೆ. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ 12 ಮೀಟರ್‍ಗೆ ಒಂದರಂತೆ ಸುಮಾರು 1400 ಪೈಪ್‍ಗಳ ಮೂಲಕ ನೀರನ್ನು ಹರಿಸಲಾಗುವುದು. ಇನ್ನೂ ಕಾಮಗಾರಿ ಕಾರ್ಯ ಮೂರು ತಿಂಗಳು ನಡೆಯಲಿದ್ದು ಎಪ್ರೀಲ್ ವೇಳೆಗೆ ಮುಕ್ತಾಯ ಹಂತ ತಲುಪಲಿದ್ದು ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಇಲಾಖೆಯ ಅಭಿಯಂತರ ಅಶೋಕ ತಳಕೇರಿ, ಮೇಲ್ವಿಚಾರಕ ಮಲ್ಲು ದೇವರ, ವ್ಯವಸ್ಥಾಪಕ ಅರುಣ ಪಾಟೀಲ, ಪ್ರಸನ್ ಜೇರಟಗಿ ಇನ್ನಿತರರು ಇದ್ದರು.